Bangalore, ಮಾರ್ಚ್ 13 -- Tomato Price Down: ಶುಭ ಸಮಾರಂಭಗಳು, ಮದುವೆ ಹಬ್ಬಗಳ ನಡುವೆಯೂ ಟೊಮೆಟೊ ಬೆಲೆ ದಿಢೀರ್ ಎಂದು ಕುಸಿದಿರುವುದು ಬೆಳೆಗಾರರ ಕಣ್ಣಲ್ಲಿ ಕಣ್ಣೀರು ತರಿಸಿದೆ. ಅಧಿಕ ಇಳುವರಿ, ಕುಸಿದ ರಫ್ತು, ರೋಗ ಮತ್ತು ಬೇಗ ಹಾಳಾಗುವ ಕಾರಣಕ್ಕೆ ಟೊಮೆಟೊ ಬೆಲೆ ಕುಸಿದಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಟೊಮೆಟೊ ಹೆಚ್ಚು ಬೆಳೆಯಲಾಗುತ್ತಿದೆ. ಕೆಜಿಗೆ 100 ರೂ. ಆಸುಪಾಸು ಇದ್ದ ಬೆಲೆ ರೂ.10 ರೂ.ಗೆ ಕುಸಿದಿದೆ. ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ 15 ಕೆಜಿ ಟೊಮೆಟೊ ಬಾಕ್ಸ್ ಬೆಲೆ 100-150 ರೂ.ಗೆ ಕುಸಿದಿದೆ. ಕೆಲವೇ ದಿನಗಳ ಹಿಂದೆ ಪ್ರತಿ ಬಾಕ್ಸ್ ಗೆ 800-1000 ರೂವರೆಗೂ ಮಾರಾಟವಾಗುತ್ತಿತ್ತು. ಬೆಂಗಳೂರಿನ ತರಕಾರಿ ಅಂಗಡಿಗಳಲ್ಲಿ ಪ್ರತಿ ಕೆಜಿಗೆ 15-20 ರೂಗೆ ಮಾರಾಟವಾಗುತ್ತಿದೆ. ಇಲ್ಲಿಯೂ ಮಧ್ಯವರ್ತಿಗಳಿಗೆ ಲಾಭವಾಗುತ್ತಿದೆಯೇ ಹೊರತು ರೈತರಿಗೆ ಪ್ರಯೋಜನವಾಗುತ್ತಿಲ್ಲ.

ಟೊಮೆಟೊ ಬೆಲೆ ಕುಸಿದಿದ್ದು, ರಸ್ತೆ ಬದಿಗೆ ಸುರಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ತಿಂಗಳ ...