Bangalore, ಏಪ್ರಿಲ್ 19 -- ಬೆಂಗಳೂರು: ಕಳೆದ ಕೆಲವು ದಿನಗಳಿಂದ ಭಾರತದ ಚಿತ್ರರಂಗದಲ್ಲಿ ಟಿಲ್ಲು ಸ್ಕೇರ್‌ ಎಂಬ ತೆಲುಗು ಸಿನಿಮಾ ಸಾಕಷ್ಟು ಸದ್ದು ಮಾಡಿದೆ. ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಇದೀಗ ಒಟಿಟಿ ಸಿನಿಮಾ ಪ್ರಿಯರಿಗೂ ಖುಷಿಯಾಗುವ ಸುದ್ದಿ ಬಂದಿದೆ. ಟಿಲ್ಲು ಸ್ಕ್ವೇರ್‌ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಇದೇ ಏಪ್ರಿಲ್‌ 26ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಟಿಲ್ಲು ಸ್ಕ್ವೇರ್‌ ಸಿನಿಮಾ ರಿಲೀಸ್‌ ಆಗಲಿದೆ ಎಂದು ಡೆಕ್ಕನ್‌ ಕ್ರಾನಿಕಲ್‌ ವರದಿ ಮಾಡಿದೆ. ಈ ಕುರಿತು ಇನ್ನಷ್ಟೇ ನೆಟ್‌ಫ್ಲಿಕ್ಸ್‌ ಕಡೆಯಿಂದ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಬಾಕ್ಸ್‌ ಆಫೀಸ್‌ನಲ್ಲಿ ನೂರು ಕೋಟಿಗೂ ಮಿಗಿಲು ಕಮಾಯಿಸಿದ ಟಿಲ್ಲು ಸ್ಕ್ವೇರ್‌ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುವುದು ವಿಳಂಬವಾಗಬಹುದೆಂದು ಬಹುತೇಕರು ಭಾವಿಸಿದ್ದರು. ಚಿತ್ರಮಂದಿರಗಳಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತಿರುವ ಸಿನಿಮಾ ಒಟಿಟಿಗೆ ತುಸು ತಡವಾಗಿ ಬರಬಹು...