Bengaluru, ಏಪ್ರಿಲ್ 6 -- Tiger Prabhakar: ನಟ ಟೈಗರ್‌ ಪ್ರಭಾಕರ್‌ ಸ್ಯಾಂಡಲ್‌ವುಡ್‌ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಚಿತ್ರರಂಗದಲ್ಲಿ ನಟನೆ ಮಾತ್ರವಲ್ಲದೆ, ಸಿನಿಮಾ ನಿರ್ಮಾಣದಲ್ಲಿಯೂ ಗುರುತಿಸಿಕೊಂಡು ಸೋಲು, ಗೆಲುವನ್ನು ಕಂಡವರು. ಇಂತಿಪ್ಪ ನಾಯಕ ನಟನ ಬದುಕಲ್ಲಿ ಒಂದಷ್ಟು ಅಹಿತಕರ ಘಟನೆಗಳು ನಡೆದವು. ಬೇಡದ ವದಂತಿಗಳು ಹಬ್ಬಿದವು. ಆರೋಗ್ಯ ಕೈ ಕೊಟ್ಟಿತು. ರೋಗ ಮೈಗಂಟಿತು. ಕುಡಿತಕ್ಕೆ ದಾಸರಾದರು. ಆ ನೋವಿನಲ್ಲಿಯೇ ಕಣ್ಮುಚಿದರು. ಆದರೆ, ಇದೇ ನಟನ ಬಗ್ಗೆ ಕೆಲವು ಸುಳ್ಳು ಸುದ್ದಿಗಳು ಚಂದನವನದಲ್ಲಿ ಸದ್ದು ಮಾಡಿದವು. ಈಗ ಆ ಬಗ್ಗೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ ಕಾಸರಗೋಡು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪ್ರಭಾಕರ್‌ ಬಗ್ಗೆ ವಿಶೇಷ ಬರಹವೊಂದನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ.

"ಟೈಗರ್ ಪ್ರಭಾಕರ್... ನಿಮಗೆ ಗೊತ್ತಿಲ್ಲದಿರುವುದೇನಲ್ಲ, ಆದರೆ ಕೆಲವೊಂದು ವಿಚಾರಗಳ ಬಗ್ಗೆ ಅಧಿಕೃತ ಮಾಹಿತಿ ಬೇಕು ಎಂಬ ಕಾರಣಕ್ಕೆ ಟೈಗರ್ ಪ್ರಭಾಕರ್ ಅವರ ಪ್ರೀತಿಯ ಪುತ್ರ ವಿನೋದ್ ಪ್ರಭಾಕರ್ ಕೈಲಿ ಮಾತಾಡಿಸಿದ್ದೇನೆ. ನನಗಿಂತಲೂ ...