Shimoga, ಫೆಬ್ರವರಿ 26 -- Tiger Death: ಶಿವಮೊಗ್ಗ ಸಾಗರ ರಸ್ತೆಯ ತ್ಯಾವರೆಕೊಪ್ಪದಲ್ಲಿರುವ ಕರ್ನಾಟಕದ ಹಳೆಯ ಮೃಗಾಲಯಗಳಲ್ಲಿ ಒಂದಾಗಿರುವ ಸಿಂಹಧಾಮದ ಹುಲಿ ವಿಜಯ್‌ ಮೃತಪಟ್ಟಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹುಲಿಗೆ ಚಿಕಿತ್ಸೆಯನ್ನು ಮೃಗಾಲಯದ ವನ್ಯಜೀವಿ ವೈದ್ಯಾಧಿಕಾರಿಗಳು ಮುಂದುವರೆಸಿದ್ದರಾದರೂ ನಿಶಕ್ತಿಯಿಂದಾಗಿ ಶಿವರಾತ್ರಿ ದಿನವಾದ ಬುಧವಾರ ಹುಲಿ ಕೊನೆಯುಸಿರೆಳೆದಿದೆ. ಹುಲಿಯನ್ನು ಮೃಗಾಲಯದ ಆವರಣದಲ್ಲಿಯೇ ರಾಷ್ಟ್ರೀ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಾಳಿವಂತೆಯೇ ಅಂತ್ಯಕ್ರಿಯೆ ನಡೆಸಲಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಅಂಜನಿ ಎನ್ನುವ ಹೆಣ್ಣು ಮೃತಪಟ್ಟಿತ್ತು. ಈಗ ಮೃಗಾಲಯದಲ್ಲಿಯೇ ಜನಿಸಿದ್ದ ವಿಜಯ್‌ ಹುಲಿಯೂ ಕೊನೆಯುಸಿರೆಳೆದಿದೆ. ಇದರಿಂದ ಶಿವಮೊಗ್ಗದ ಮೃಗಾಲಯದಲ್ಲಿ ಈಗ ಗಂಡು ಹುಲಿಗಳಿಲ್ಲ. ನಾಲ್ಕು ಹೆಣ್ಣು ಹುಲಿಗಳು ಮಾತ್ರ ಉಳಿದುಕೊಂಡಿವೆ. ಮೃಗಾಲಯಕ್ಕೆ ಗಂಡು ಹುಲಿಗಳನ್ನು ತರುವ ನಿಟ್ಟಿನಲ್ಲಿ ಹುಡುಕಾಟಗಳನ್ನು ನಡೆಸಲಾಗುತ್ತಿದೆ.

ಮೃಗಾಲಯದಲ್ಲಿಯೇ ಜನಿಸಿದ್ದ ವಿಜಯ್‌ ಹುಲಿಯನ್ನು ಕೆಲ ವರ್ಷಗಳ ...