Delhi, ಮಾರ್ಚ್ 13 -- ಭಾರತದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ ನಡೆಸಲಾಗುತ್ತಿದೆ. ಆರನೇ ಆವೃತ್ತಿಯ ಹುಲಿ ಗಣತಿ ಮುಂದಿನ ವರ್ಷ ನಡೆಯಲಿದೆ,

ನಾಲ್ಕು ವರ್ಷದ ಹಿಂದೆ ಅಂದರೆ 2022 ರಲ್ಲಿ ಭಾರತಾದ್ಯಂತ ಹುಲಿ ಗಣತಿ ನಡೆಸಲಾಗಿತ್ತು. ಹುಲಿ ಗಣತಿ ವರದಿಯನ್ನು ಮರು ವರ್ಷ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು.

ಹುಲಿ ಗಣತಿ ನಡೆಯುವ ವರ್ಷದ ಮುನ್ನಾ ವರ್ಷ ಅರಣ್ಯ ಇಲಾಖೆ ಅಧಿಕಾರಿಗಳು. ಸಿಬ್ಬಂದಿ, ಸ್ವಯಂ ಸೇವಾ ಸಂಘಟನೆ ಪ್ರಮುಖರು, ಸ್ವಯಂ ಸೇವಕರಿಗೆ ತರಬೇತಿ ನೀಡಲಾಗುತ್ತದೆ. ಅದು ಸದ್ಯದಲ್ಲೇ ಎಲ್ಲಾ ರಾಜ್ಯಗಳಲ್ಲಿ ಶುರುವಾಗಲಿದೆ.

ದೆಹಲಿಯಲ್ಲಿ ಮಂಗಳವಾರ ಹಾಗೂ ಬುಧವಾರ ನಡೆದ ಹುಲಿ ಯೋಜನೆ ಕರ್ನಾಟಕದ ಎಲ್ಲಾ ನಿರ್ದೇಶಕರ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ವೇಳೆ ಹುಲಿ ಗಣತಿ ಹೊತ್ತಿಯನ್ನು ಬಿಡುಗಡೆ ಮಾಡಲಾಯಿತು.

ಆಯಾ ರಾಜ್ಯಗಳ ಅರಣ್ಯ ಇಲಾಖೆಗಳು, ಹುಲಿ ಯೋಜನೆ ನಿರ್ದೇಶಕರು, ಹುಲಿ ಸಂರಕ್ಷಿತ ಪ್ರದೇಶಗಳ ಮುಖ್ಯಸ್ಥರು ತಯಾರಿಯನ್ನು ಆರಂಭಿಸಬೇಕು. ಮುಂದಿನ ವರ್ಷ ವ್ಯವಸ್ಥಿತವಾಗಿ ಗಣತಿ ನಡೆಸ...