ಭಾರತ, ಫೆಬ್ರವರಿ 8 -- ನಮ್ಮ ದೇಹ ಆರೋಗ್ಯವಾಗಿ, ಸಮತೋಲನದಲ್ಲಿರಲು ಥೈರಾಯಿಡ್ ಗ್ರಂಥಿಯು ಆರೋಗ್ಯದಿಂದಿರಬೇಕು. ಥೈರಾಯ್ಡ್ ಗ್ರಂಥಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಶಕ್ತಿಯ ಮಟ್ಟವು ಸ್ಥಿರವಾಗಿರುತ್ತದೆ. ಥೈರಾಯಿಡ್‌ ಎಂದರೆ ನಮ್ಮ ಕುತ್ತಿಗೆಯ ಭಾಗದಲ್ಲಿರುವ ಒಂದು ಚಿಟ್ಟೆಯಾಕಾರದ ಗ್ರಂಥಿ. ಈ ಗ್ರಂಥಿಯು ದೇಹದ ವಿವಿಧ ಕಾರ್ಯಗಳಿಗೆ ನೆರವಾಗುತ್ತದೆ. ಥೈರಾಯಿಡ್ ಹಾರ್ಮೋನ್‌ ಸ್ರವಿಸುವಿಕೆಯಲ್ಲಿ ವ್ಯತ್ಯಾಸವಾದರೆ ಥೈರಾಯಿಡ್ ಸಮಸ್ಯೆ ಉಂಟಾಗುತ್ತದೆ. ಥೈರಾಯಿಡ್‌ನಲ್ಲಿ ಎರಡು ವಿಧಗಳಿವೆ. ಒಂದು ಹೈಪೋಥೈರಾಯಿಡಿಸಮ್, ಇನ್ನೊಂದು ಹೈಪರ್ ಥೈರಾಯಿಡಿಸಮ್.

ಥೈರಾಯ್ಡ್ ಗ್ರಂಥಿಯು ದೇಹದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಥೈರಾಯ್ಡ್ ಹಾರ್ಮೋನುಗಳನ್ನು (T3, T4) ಉತ್ಪಾದಿಸಲು ಸಾಧ್ಯವಾಗದಿದ್ದಾಗ ಹೈಪೋಥೈರಾಯ್ಡಿಸಮ್ ಸಂಭವಿಸುತ್ತದೆ. ಪರಿಣಾಮವಾಗಿ, ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ. ಬಹುತೇಕ ಎಲ್ಲಾ ದೇಹದ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಲಕ್ಷಣಗಳು ದೌರ್ಬಲ್ಯ, ಆಯಾಸ, ಆಲಸ್ಯ, ದಣಿದ ಭಾವನೆ, ತೂಕ ಹೆಚ್ಚಾಗುವುದ...