ಭಾರತ, ಜನವರಿ 31 -- ಭಾರತದಲ್ಲಿ ಅಂದಾಜು 42 ಮಿಲಿಯನ್ ಜನರು ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಆಟೊ ಇಮ್ಯೂನ್‌ (ಸ್ವಯಂ ನಿರೋಧಕ) ಸ್ಥಿತಿಯು ಬಹಳ ಸಹಜ ಸಮಸ್ಯೆ ಎಂಬಂತೆ ಬೆಳೆಯುತ್ತಿದೆ. ಸರಿಯಾದ ಆಹಾರ ಸೇವಿಸದೇ ಇರುವುದು ಅಯೋಡಿನ್ ಕೊರತೆಗೆ ಕಾರಣವಾಗುತ್ತದೆ, ಇದು ಥೈರಾಯಿಡ್ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತದೆ. ಇದು ಗಾಯಿಟರ್ ಮತ್ತು ಹೈಪೋಥೈರಾಯ್ಡಿಸಮ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಮಸ್ಯೆ ಹೆಚ್ಚಾಗಿ ಮಹಿಳೆಯರಲ್ಲೇ ಕಂಡುಬರುತ್ತದೆ. ಇದೊಂದು ಅಂತಃಸ್ರಾವಕ ಅಸ್ವಸ್ಥತೆಯೂ ಆಗಿದೆ.

ಬೆಂಗಳೂರಿನ ಸಕ್ರಾ ವರ್ಲ್ಡ್ ಆಸ್ಪತ್ರೆಯ ಮಧುಮೇಹ ಮತ್ತು ಅಂತಃಸ್ರಾವಶಾಸ್ತ್ರ ನಿರ್ದೇಶಕ ಡಾ. ಮಂಜುನಾಥ ಮಾಳಿಗೆ ಅವರು ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ 'ಥೈರಾಕ್ಸಿನ್ (T4) ಮತ್ತು ಟ್ರಯೋಡೋಥೈರೋನಿನ್ (T3) ಕುತ್ತಿಗೆಯಲ್ಲಿರುವ ಚಿಟ್ಟೆಯ ಆಕಾರದ ಗ್ರಂಥಿಯಾದ ಥೈರಾಯಿಡ್‌ನಿಂದ ಉತ್ಪತ್ತಿಯಾಗುವ ಹಾರ್ಮೋನ್ ಆಗಿದೆ. ಈ ಹಾರ್ಮೋನುಗಳು ಜೀರ್ಣಕ್ರಿಯೆ, ಮನಸ್ಥಿತಿ ಮತ್ತು ಉತ್ಸಾಹ, ದೇಹದ ಉಷ್ಣತೆ, ...