Bengaluru, ಫೆಬ್ರವರಿ 22 -- Thursday Motivation: ಮನುಷ್ಯ ಜೀವನದಲ್ಲಿ ಏನಾದರೂ ಸಾಧಿಸಬೇಕು, ಸುಖ ಸಂತೋಷ ನೆಮ್ಮದಿಯಿಂದ ಬದುಕು ಸಾಗಿಸಬೇಕು ಎನ್ನುವುದಾದರೆ ಆತನಿಗೆ ಜೀವನದಲ್ಲಿ ಇತರರು ಮಾದರಿಯಾಗಬೇಕು. ಪ್ರೇರಣೆ ಆಗಬೇಕು. ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬ ಡಾ. ರಾಜ್‌ಕುಮಾರ್‌ ಅವರ ಬಂಗಾರದ ಮನುಷ್ಯ ಚಿತ್ರದ ಹಾಡನ್ನು ಎಲ್ಲರೂ ಕೇಳಿರುತ್ತೀರ.

ಇದನ್ನೂ ಓದಿ: ನಿಜ ಜೀವನದ ಕಥೆ; ದೃಢ ಮನಸ್ಸು ಇದ್ದರೆ ಎಷ್ಟೇ ಕಷ್ಟಗಳು ಬಂದರೂ ಗೆಲ್ಲಬಹುದು ಅನ್ನೋದಕ್ಕೆ ಇವರೇ ಸಾಕ್ಷಿ

ಬಂಗಾರದ ಮನುಷ್ಯ ಸಿನಿಮಾ ಬಿಡುಗಡೆ ಆದ ನಂತರ ಎಷ್ಟೋ ಯುವಜನತೆ ಹಳ್ಳಿಯಿಂದ ಪಟ್ಟಣಕ್ಕೆ ಬಂದು ವ್ಯವಸಾಯ ಆರಂಭಿಸಿದ್ದರು. ಈ ಬದಲಾವಣೆಗೆ ಆ ಸಿನಿಮಾ ಕಥೆಯೇ ಪ್ರೇರಣೆ. ಇದೇ ರೀತಿ ಮತ್ತೊಂದು ಉತ್ತಮ ಉದಾಹರಣೆ ಇಲ್ಲಿದೆ.

ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಬುದ್ಧಿವಂತಿಕೆಯ ಜೊತೆಗೆ ಆತನಿಗೆ ಬಹಳ ತಾಳ್ಮೆ ಇತ್ತು. ಇದ್ದಕ್ಕಿದ್ದಂತೆ ಆ ಗ್ರಾಮದಲ್ಲಿ ಭೀಕರ ಬರಗಾಲ ಕಾಣಿಸಿಕೊಂಡಿತು. ಹೊಲ ಗದ್ದೆಗಳು ನೀರು ಇಲ್ಲದೆ ಬತ್ತಿ ಹೋಗ...