ಭಾರತ, ಫೆಬ್ರವರಿ 27 -- Thriller OTT: ತಮಿಳು ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಬಯಸುವವರಿಗೆ ಹೊಸ ಸಿನಿಮಾವೊಂದು ಕಾಯುತ್ತಿದೆ. ಕಾಲಿವುಡ್ ಬಹುಮುಖ ಪ್ರತಿಭೆಯ ನಟ ಸಮುದ್ರಖನಿ (Samuthirakani ) ಪ್ರಮುಖ ಪಾತ್ರದಲ್ಲಿ ನಟಿಸಿರುವ 'ರೈಟರ್ʼ ಇದೀಗ ಒಟಿಟಿಗೆ ಆಗಮಿಸಿದೆ. ವಿಶೇಷವೆಂದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಾಲ್ಕು ವರ್ಷಗಳ ತರುವಾಯ ಈ ಚಿತ್ರವು ಒಟಿಟಿಗೆ ಆಗಮಿಸಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸ್ಟ್ರೀಮಿಂಗ್‌ಆಗುತ್ತಿದೆ. ಆಹಾ ತಮಿಳು ಒಟಿಟಿಯಲ್ಲಿ ಈ ಚಿತ್ರವನ್ನು ನೋಡಬಹುದು.

ಕಾಲಿವುಡ್ ನಿರ್ದೇಶಕ ಪಾ ರಂಜಿತ್ ರೈಟರ್ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ಫ್ರಾಂಕ್ಲಿನ್ ಜಾಕೋಬ್ ನಿರ್ದೇಶನವಿದೆ. 2021ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರದ ಕುರಿತು ಒಳ್ಳೆಯ ಮಾತುಗಳು ಕೇಳಿಬಂದಿದ್ದವು. ಈ ಚಿತ್ರದಲ್ಲಿ ಸಮುದ್ರಖನಿ ನಟನೆ ಚೆನ್ನಾಗಿದೆ ಮತ್ತು ಚಿತ್ರದ ಪರಿಕಲ್ಪನೆಯೂ ಉತ್ತಮವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಪೊಲೀಸ್ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರದ ಕು...