ಭಾರತ, ಫೆಬ್ರವರಿ 15 -- Thriller OTT: ಒಟಿಟಿಯಲ್ಲಿ ಮಲಯಾಳಂ ಸಿನಿಮಾಗಳಿಗೆ ದೊಡ್ಟಮಟ್ಟದ ಪ್ರೇಕ್ಷಕ ಬಳಗವಿದೆ. ಮಲಯಾಳಂನಲ್ಲಿ ಇತ್ತೀಚೆಗೆ ರೇಖಾಚಿತ್ರಂ (Rekhachithram) ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿದೆ. ಮಲಯಾಳಂನ ಈ ನಿಗೂಢ ಥ್ರಿಲ್ಲರ್‌ ಚಿತ್ರವು ಒಟಿಟಿಗೆ ಬಿಡುಗಡೆಯಾಗುವುದು ಇನ್ನಷ್ಟು ತಡವಾಗುತ್ತಿದೆ. ಫೆಬ್ರವರಿ ತಿಂಗಳಲ್ಲಿ ಇದು ಒಟಿಟಿಯಲ್ಲಿ ಬಿಡುಗಡೆಯಾಗಬಹುದೆಂದು ವದಂತಿಗಳಿದ್ದವು. ಆದರೆ, ಸಿನಿಮಾ ನಿರ್ಮಾಪಕರು ಅಭಿಮಾನಗಳಿಗೆ ಬೇಸರದ ಸುದ್ದಿ ನೀಡಿದ್ದಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎರಡು ತಿಂಗ ಬಳಿಕ ಒಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ, ಈ ಸಿನಿಮಾ ಫೆಬ್ರವರಿ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗದು. ಮುಂದಿನ ತಿಂಗಳು, ಮಾರ್ಚ್‌ನಲ್ಲಿ ಬಿಡುಗಡೆಯಾಗುವ ಸೂಚನೆ ಇದೆ.

ರೇಖಾಚಿತ್ರಂ ಸಿನಿಮಾದ ಒಟಿಟಿ ಬಿಡುಗಡೆ ಕುರಿತು ಸೋಷಿಯಲ್‌ ಮೀಡಿಯಾಲ್ಲಿ ಈಗ ಚರ್ಚೆಯಾಗುತ್ತಿದೆ. ಈ ಸಿನಿಮಾ ಮಾರ್ಚ್‌ 14ರಿಂದ ಸೋನಿಲಿವ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಎನ್ನಲಾಗುತ್ತಿದೆ...