ಭಾರತ, ಏಪ್ರಿಲ್ 12 -- Crazxy Movie OTT: ಒಂದು ಸಿನಿಮಾದಲ್ಲಿ ಎಷ್ಟು ಪಾತ್ರಗಳನ್ನು ನೋಡಬಹುದು. ಹತ್ತರಿಂದ ನೂರಾರು ಕಲಾವಿದರು ಪರದೆಯಲ್ಲಿ ಕಾಣಿಸುತ್ತಾರೆ. ಆದರೆ, ಪರದೆಯ ಮೇಲೆ ಒಬ್ಬನೇ ಒಬ್ಬ ಕಲಾವಿದ ಕಾಣಿಸಿಕೊಳ್ಳುವ ಸಿನಿಮಾ ನೋಡಿದ್ದೀರಾ? ನೋಡಿಲ್ಲ ಎಂದಾದರೆ ಕ್ರೇಜಿ (Crazxy) ಎಂಬ ಸಿನಿಮಾವನ್ನು ಈಗಲೇ ಒಟಿಟಿಯಲ್ಲಿ ನೋಡಿ. ಸೋಹಮ್ ಶಾ ನಟಿಸಿದ ಕ್ರೇಜಿ ಚಿತ್ರ ಫೆಬ್ರವರಿ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ತುಂಬದ್ ಚಿತ್ರವನ್ನು ನಿರ್ಮಿಸಿದ ಸೋಹಂ ಶಾ ಫಿಲ್ಮ್ಸ್ ಬ್ಯಾನರ್‌ನಿಂದ ಬಂದ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿದ್ದವು. ಕ್ರೇಜಿ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಈ ಚಿತ್ರವನ್ನು ಗಿರೀಶ್ ಕೊಹ್ಲಿ ನಿರ್ದೇಶಿಸಿದ್ದಾರೆ.

ಈ ಕ್ರೇಜಿ ಸಿನಿಮಾವು ಇಂದು (ಏಪ್ರಿಲ್ 12) ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಸದ್ಯ ಈ ಸಿನಿಮಾವನ್ನು ರೆಂಟ್‌ ಅಥವಾ ಬಾಡಿಗೆ ಆಧಾರದಲ್ಲಿ ಮಾತ್ರ ನೋಡಬಹುದು. ಏಪ್ರಿಲ್ 25 ರಂದು ಚಿತ್ರವು ಬಾಡಿಗೆ ರಹಿತವಾಗಿ ಬಿಡುಗಡೆಯಾಗುವ ಸ...