ಭಾರತ, ಮಾರ್ಚ್ 28 -- Deva OTT release: ಶಾಹಿದ್ ಕಪೂರ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ದೇವಾ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಇಂದು ಬಿಡುಗಡೆಯಾಗಿದೆ. ಜನವರಿ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. ಸುಮಾರು ಒಂದು ತಿಂಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ನೀಡಿದೆ. ಇದೀಗ ಈ ಆಕ್ಷನ್-ಥ್ರಿಲ್ಲರ್ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ದೇವಾ ಸಿನಿಮಾ ಬಿಡುಗಡೆಯಾಗುವ ಕುರಿತು ನೆಟ್‌ಫ್ಲಿಕ್ಸ್‌ ಅಧಿಕೃತವಾಗಿ ನಿನ್ನೆ ಮಾಹಿತಿ ನೀಡಿತ್ತು. ಇಂದು ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ದೇವಾ ಸಿನಿಮಾದಲ್ಲಿ ಶಾಹಿದ್ ಕಪೂರ್, ಪೂಜಾ ಹೆಗ್ಡೆ, ಪವೈಲ್ ಗುಲಾಟಿ ಮತ್ತು ಕುಬ್ರಾ ಸೇಠ್ ನಟಿಸಿದ್ದಾರೆ.

ಸಿದ್ಧಾರ್ಥ್ ರಾಯ್ ಕಪೂರ್ ಅವರ ರಾಯ್ ಕಪೂರ್ ಫಿಲ್ಮ್ಸ್ ನೆರವಿನೊಂದಿಗೆ ಮಲಯಾಳಂನ ಕ್ರೈಮ್‌ ಡ್ರಾಮಾ "ಮುಂಬೈ ಪೊಲೀಸ್‌"ನ ರಿಮೇಕ್‌ ಆಗಿದೆ. ಇದೀಗ ದೇವಾ ಸಿನಿಮಾ ಡಿಜಿಟಲ್‌ ಪ್ರೀಮಿಯರ್‌ಗೆ ಸಜ್ಜಾಗಿದೆ. ಈ ಮೂಲಕ ಇದು ಹೆಚ್ಚು ಜನರನ್ನು ತಲುಪುವ ನಿರೀಕ್ಷ...