ಭಾರತ, ಮಾರ್ಚ್ 14 -- Malayalam mystery thriller Movie OTT: ಈ ವಾರ ಮಲಯಾಳಂ ಸ್ಟಾರ್‌ ನಟ ಬಾಸಿಲ್‌ ಜೋಸೆಫ್‌ ಸಿನಿಮಾಗಳು ಒಟಿಟಿ ಮತ್ತು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇಂದು ಮಾರ್ಚ್‌ 14ರಂದು ಜಿಯೋಹಾಟ್‌ಸ್ಟಾರ್‌ನಲ್ಲಿ ಪೊನ್‌ಮನ್‌ ಎಂಬ ಸಿನಿಮಾ ಬಿಡುಗಡೆಯಾಗಿದೆ. ಫೆಬ್ರವರಿ 2025ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಪ್ರವೀಣ್‌ಕೂಡು ಶಾಪ್ಪು ಎಂಬ ಸಿನಿಮಾದಲ್ಲಿಯೂ ಇವರು ನಟಿಸಿದ್ದಾರೆ. ಪ್ರವಿನ್‌ಕೂಡು ಶಾಪ್ಪು ಸಿನಿಮಾ ಒಟಿಟಿಯಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ಶ್ರೀರಾಜ್ ಶ್ರೀನಿವಾಸನ್ ನಿರ್ದೇಶನದ ಈ ಸಿನಿಮಾವು ಡಾರ್ಕ್‌ ಕಾಮಿಡಿ ಪ್ರಕಾರದ್ದಾಗಿದೆ. ಈ ಸಿನಿಮಾ ನೋಡುವಾಗ ಹರ್ಕ್ಯುಲ್ ಪಾಯ್ರೋಟ್ ಪುಸ್ತಕಗಳು ಮತ್ತು ಚಲನಚಿತ್ರಗಳು ನೆನಪಿಗೆ ಬರಬಹುದು. ಪ್ರವೀನ್‌ಕೂಡು ಶಪ್ಪು (ಅಥವಾ ಶಾಪ್ಪು) ಏಪ್ರಿಲ್ 11 ರಿಂದ ಸೋನಿ ಲಿವ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಅಂದರೆ, ಈ ಸಿನಿಮಾ ನೋಡಲು ಮುಂದಿನ ತಿಂಗಳ 11ನೇ ತಾರೀಕಿನವರೆಗೆ ಕಾಯಬೇಕು.

ಈ ಸಿನಿಮಾದಲ್ಲಿ ಬಾಸಿಲ್‌ ಜೋಸೆಫ್‌ ...