Bengaluru, ಮಾರ್ಚ್ 3 -- Thriller Movie: ರಿಷಬ್‌ ಶೆಟ್ಟಿ ನಟನೆಯ ಕಾಂತಾರದಂತೆಯೇ ಮಲಯಾಳಂ ಸಿನಿಮಾವೊಂದು ಈ ವಾರ ಬಿಡುಗಡೆಯಾಗುತ್ತಿದೆ. ಕಾಂತಾರ ಸಿನಿಮಾದಲ್ಲಿ ದೈವರಾಧನೆ ಪ್ರಮುಖ ವಿಷಯವಾಗಿದ್ದರೆ, ಕಿಶೋರ್‌ ನಟನೆಯ ವಡಕ್ಕನ್‌ ಸಿನಿಮಾದಲ್ಲಿ ಅಲೌಕಿಕ ಶಕ್ತಿಯ "ಭಯಾನಕ" ಗೂಸ್‌ಬಂಪ್ಸ್‌ ಇರುವ ಸೂಚನೆಯಿದೆ. ವಡಕ್ಕನ್‌ ಸಿನಿಮಾವು ಫ್ರೈಟ್‌ ನೈಟ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ "ಅತ್ಯುತ್ತಮ ಅಲೌಕಿಕ ಥ್ರಿಲ್ಲರ್‌" ಪ್ರಶಸ್ತಿ ಪಡೆದಿತ್ತು.

ವಡಕ್ಕನ್‌ ಸಿನಿಮಾ ಅನೂಹ್ಯ, ಅಲೌಕಿಕ ಶಕ್ತಿಗೆ ಸಂಬಂಧಪಟ್ಟದ್ದು. ಆದರೆ, ಆ ಶಕ್ತಿ ಭೂತವೇ, ಪಿಶಾಚಿಯೇ ಅಥವಾ ಪ್ರಾಚೀನರು ನಂಬುತ್ತಿದ್ದ ದೈವವೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದರೆ, ಕಾಂತಾರ ಸಿನಿಮಾವು ತುಳುನಾಡಿನ ಭೂತಾರಾಧನೆಗೆ ಸಂಬಂಧಪಟ್ಟಿತ್ತು. ಆದರೆ, ವಡಕ್ಕನ್‌ ಸಿನಿಮಾದ ಟ್ರೇಲರ್‌ನಲ್ಲಿ ಕಾಣಿಸುವ ಆ ಅನೂಹ್ಯ ಶಕ್ತಿಯೂ "ಭೂತ"ದಂತೆ ಕಾಣಿಸುತ್ತದೆ. ಆದರೆ, ಆ ಶಕ್ತಿಯ ಕುರಿತು ಹೆಚ್ಚಿನ ವಿವರ ಇಲ್ಲ.

ಹೆಲ್ಸಿಂಕಿ ಮೂಲದ ಅಧಿಸಾಮಾನ್ಯ ತನಿಖಾಧಿಕಾರಿ (paranormal invest...