Bengaluru, ಮಾರ್ಚ್ 26 -- ಚಿತ್ರಮಂದಿರಗಳಲ್ಲಿ ಈ ಮೂರು ದಿನಗಳ ಕಾಲ ಸೂಪರ್‌ಸ್ಟಾರ್‌ಗಳ ಸಿನಿಮಾಗಳ ಆಗಮನವಾಗುತ್ತಿವೆ. ಮಲಯಾಳಂ, ತಮಿಳು, ಹಿಂದಿಯಲ್ಲಿ ಸ್ಟಾರ್‌ ನಟರ ಚಿತ್ರಗಳು ತೆರೆಗೆ ಬರಲು ರೆಡಿಯಾಗಿವೆ.

ರಾಬಿನ್‌ ಹುಡ್‌: ಟಾಲಿವುಡ್‌ ನಟ ನಿತಿನ್ ಮತ್ತು ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ʻರಾಬಿನ್ ಹುಡ್ʼ ಸಿನಿಮಾ ಮಾ. 28ರಂದು ಬಿಡುಗಡೆ ಆಗಲಿದೆ. ಮಾರ್ಚ್‌ 28ರಂದು ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಈ ಸಿನಿಮಾವನ್ನು ವೆಂಕಿ ಕುಡುಮುಲ ನಿರ್ದೇಶನ ಮಾಡಿದ್ದಾರೆ. ಕರ್ನಾಟಕದಲ್ಲಿ ಈ ಚಿತ್ರವನ್ನು ವಿಕೆ ಫಿಲಂಸ್‌ ವಿತರಣೆ ಮಾಡುತ್ತಿದೆ.

ಸಿಕಂದರ್‌: ಬಾಲಿವುಡ್‌ ನಟ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಾಯಕ ನಾಯಕಿಯಾಗಿರುವ ಈ ಸಿನಿಮಾ ಸಿಕಂದರ್. ಮಾರ್ಚ್‌ 30ರ ಈದ್‌ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಿಗೆ ಈ ಸಿನಿಮಾ ಬಿಡುಗಡೆ ಆಗಲಿದೆ. ಎ.ಆರ್‌ ಮುರುಗದಾಸ್‌ ನಿರ್ದೇಶನದ ಈ ಚಿತ್ರವನ್ನು ಸಾಜಿದ್‌ ನಾಡಿಯಾಡ್ವಾಲಾ ನಿರ್ಮಾಣ ಮಾಡಿದ್ದಾರೆ.

ಮನದ ಮಾತು: ಯೋಗರಾಜ್‌ ಭಟ್‌ ನಿರ್ದೇಶನದ ಮನದ ಕಡಲು ಸಿನಿ...