Bengaluru, ಮಾರ್ಚ್ 26 -- Theatrical Releases this week: ಮುಂದಿನ ಮೂರು ದಿನಗಳ ಅವಧಿಯಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 5 ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರದತ್ತ ಆಗಮಿಸುತ್ತಿವೆ. ಬಾಲಿವುಡ್‌ನಲ್ಲಿ ಸಲ್ಮಾನ್‌ ಖಾನ್‌ ಸಿಕಂದರ್‌, ಕನ್ನಡದಲ್ಲಿ ಯೋಗರಾಜ್‌ ಭಟ್‌ ನಿರ್ದೇಶನದ ಮನದ ಕಡಲು, ತಮಿಳಿನ ವೀರ ಧೀರ ಸೂರನ್‌ ಮತ್ತು ಮಲಯಾಳಂನ ಎಂಪುರಾನ್‌, ತೆಲುಗಿನ ರಾಬಿನ್‌ ಹುಡ್‌ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಆ ಚಿತ್ರಗಳ ರಿಲೀಸ್‌ ಕುರಿತ ವಿವರ ಇಲ್ಲಿದೆ.

ಯೋಗರಾಜ್‌ ಭಟ್‌ ನಿರ್ದೇಶನದ ಮನದ ಕಡಲು ಸಿನಿಮಾ ಇದೇ ಮಾರ್ಚ್‌ 28ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಮತ್ತೆ ಹೊಸ ಮುಖಗಳ ಜತೆಗೆ ಹೊಸ ಕಥೆಯೊಂದಿಗೆ ಆಗಮಿಸಿದ ಭಟ್ರು, ಮತ್ತೊಂದು ಯುವ ಪೀಳಿಗೆಗೆ ಹತ್ತಿರ ಎನಿಸುವ ಕಥೆಯ ಜತೆಗೆ ಆಗಮಿಸಿದ್ದಾರೆ. ಇ.ಕೆ ಎಂಟರ್ಟೈನರ್ಸ್ ಬ್ಯಾನರ್‌ನಲ್ಲಿ ಇ.ಕೃಷ್ಣಪ್ಪ ಮತ್ತು ಜಿ ಗಂಗಾಧರ್‌ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾ, ಈಗಾಗಲೇ ಹಲವು ವಿಚಾರಕ್ಕೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ʻವಾಚ್‌ ಕೊಡುವ ನೆಪದಲ್...