Bengaluru, ಮಾರ್ಚ್ 31 -- ಜ್ಯೋತಿಷ್ಯಶಾಸ್ತ್ರ ಮತ್ತು ಆಧ್ಯಾತ್ಮದಲ್ಲಿ ಮಾನವನ ದೇಹದಲ್ಲಿರುವ ಚಕ್ರಗಳಿಗೆ ವಿಶೇಷ ಮಾನ್ಯತೆಯಿದೆ. ಮಾನವ ದೇಹವು ಚಕ್ರಗಳು ಎಂದು ಕರೆಯಲ್ಪಡುವ ಏಳು ಶಕ್ತಿ ಕೇಂದ್ರಗಳನ್ನು ಹೊಂದಿದೆ. ಪ್ರತಿಯೊಂದು ಚಕ್ರವು ನಮ್ಮ ದೈಹಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದಲ್ಲಿ ವಿಶಿಷ್ಟ ಪಾತ್ರವನ್ನು ವಹಿಸುತ್ತದೆ. ಗಂಟಲು ಚಕ್ರ (ವಿಶುದ್ಧ) ಸಂವಹನ, ಸ್ವಯಂ ಅಭಿವ್ಯಕ್ತಿ ಮತ್ತು ಸತ್ಯದ ಕೇಂದ್ರವಾಗಿದೆ. ಅದನ್ನು ನಿರ್ಬಂಧಿಸಿದಾಗ, ನೀವು ಮಾತನಾಡಲು ಹೆಣಗಾಡಬಹುದು, ಶ್ರವಣ ದೋಷ ಅನುಭವಿಸಬಹುದು ಅಥವಾ ಗಂಟಲು ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಸಹ ಅನುಭವಿಸಬಹುದು.

ಅಂತಹ ಸಮಸ್ಯೆ ಉಂಟಾಗಿದ್ದರೆ ಮತ್ತು ನೀವು ವಿಶುದ್ಧ ಚಕ್ರದ ತೊಂದರೆಯಿಂದ ಬಳಲುತ್ತಿದ್ದರೆ ಸರಳ ತಂತ್ರಗಳಿಂದ ನಿಮ್ಮ ವಿಶುದ್ಧ ಚಕ್ರವನ್ನು ಗುಣಪಡಿಸಬಹುದು ಮತ್ತು ಸಕ್ರಿಯಗೊಳಿಸಬಹುದು. ಯೋಗ ಮತ್ತು ಧ್ಯಾನದ ಮಾರ್ಗದರ್ಶನ ನೀಡುವ ಮರಿಯಾ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಶುದ್ಧ ಚಕ್ರವನ್ನು ಗುಣಪಡಿಸಲು ಐದು ಸುಲಭ ಹಂತಗಳನ್ನು ಹಂಚಿಕೊಂ...