Bengaluru, ಮಾರ್ಚ್ 7 -- ಇತಿಹಾಸದುದ್ದಕ್ಕೂ, ಮಹಿಳೆಯರು ಸಾಮಾಜಿಕವಾಗಿ ಹಲವಾರು ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾರೆ. ಆದರೂ ಈ ಅಡೆತಡೆಗಳನ್ನು ನಿವಾರಿಸುವಲ್ಲಿ ಅತ್ಯಂತ ಶಕ್ತಿಯುತ ಶಕ್ತಿಗಳಲ್ಲಿ ಒಂದಾಗಿದೆ ಮಹಿಳೆಯರು ಪರಸ್ಪರರಿಗೆ ನೀಡುವ ಅಚಲ ಬೆಂಬಲ. ಸಹೋದರಿತ್ವವು ಕೇವಲ ಒಂದು ಸಂಬಂಧಕ್ಕಿಂತ ಒಂದು ವಿಶೇಷ ಬಂಧವಾಗಿದೆ. ಹಾಗಾದರೆ ಒಬ್ಬ ಮಹಿಳೆಗೆ ಇನ್ನೊಬ್ಬ ಮಹಿಳೆಯ ಬೆಂಬಲ ಏಕೆ ಅಗತ್ಯ? ಆಕೆಯ ಮಾನಸಿಕ ಮತ್ತು ಸಾಮಾಜಿಕ ಶಕ್ತಿ ಸಬಲೀಕರಣದಲ್ಲಿ ಇದು ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ? ಮುಂದಕ್ಕೆ ಓದಿ..

ಪರಸ್ಪರ ಸ್ಪರ್ಧಿಗಳಾಗದೆ ಒಬ್ಬರಿಗೊಬ್ಬರು ಹೆಗಲಾಗುವ, ಕಷ್ಟಕ್ಕೆ ಸ್ಪಂದಿಸುವ, ಕುಗ್ಗಿದಾಗ ಧೈರ್ಯ ತುಂಬುವ ಸ್ನೇಹಿತೆ ಪ್ರತೀ ಹೆಣ್ಣಿನ ಜೇವನದಲ್ಲಿ ಬಹಳ ಮುಖ್ಯ. ಇದು ಲಿಂಗ ತಾರತಮ್ಯವನ್ನು ಪ್ರಶ್ನಿಸುವ, ಅಸಮಾನತೆಯ ವಿರುದ್ಧ ಹೋರಾಡುವ ಮತ್ತು ಭವಿಷ್ಯದ ಪೀಳಿಗೆಗೆ ಬಾಗಿಲು ತೆರೆಯುವ ಸಾಮೂಹಿಕ ಶಕ್ತಿಯಾಗಲು ಪರಸ್ಪರರಿಗೆ ಸಹಾಯ ಮಾಡುತ್ತದೆ. ಒಟ್ಟಾಗಿ ನಿಲ್ಲುವ ಮೂಲಕ, ಮಹಿಳೆಯರು ಶಿಕ್ಷಣ, ಕೆಲಸದ ಸ್ಥಳ ಮತ್ತು ...