ಭಾರತ, ಮಾರ್ಚ್ 13 -- Test Movie OTT release: ಸಿದ್ದಾರ್ಥ್‌, ಮಾಧವನ್‌, ನಯನತಾರಾ ಅಭಿನಯದ ಟೆಸ್ಟ್‌ ಸಿನಿಮಾವು ನೇರವಾಗಿ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಇದು ಕ್ರಿಕೆಟ್‌ ಆಧರಿತ ಕ್ರೀಡಾ ನಾಟಕ. ಈ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಿಲ್ಲ. ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಈ ಚಿತ್ರದಲ್ಲಿ ಸಿದ್ಧಾರ್ಥ್‌ ಅನುಭವಿ ಬ್ಯಾಟ್ಸ್‌ಮನ್ ಪಾತ್ರದಲ್ಲಿ ನಟಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಟೀಸರ್‌ ಅನ್ನು ಕ್ರಿಕೆಟಿಗ ಅಶ್ವಿನ್‌ ರವಿಚಂದ್ರನ್‌ ಬಿಡುಗಡೆ ಮಾಡಿದ್ದಾರೆ.

ನಟರಾದ ಮಾಧವನ್, ನಯನತಾರಾ ಮತ್ತು ಸಿದ್ಧಾರ್ಥ್ ಅವರೊಂದಿಗೆ ನಟಿಸಿರುವ ನಟಿ 'ಅಮಿಲ್' ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಟೆಸ್ಟ್‌ ಸಿನಿಮಾವು ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗ ಆರ್. ಅಶ್ವಿನ್ ಅವರು ಸಿದ್ಧಾರ್ಥ್‌ ಅವರ ಪಾತ್ರದ ಪ್ರೋಮೊವನ್ನು ಬಿಡುಗಡೆ ಮಾಡಿದ್ದಾರೆ.

ಈ ಟೀಸರ್‌ನಲ್ಲಿ ಸಿದ್ದಾರ್ಥ್‌ ಅರ್ಜುನ್‌ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜ...