ಭಾರತ, ಮಾರ್ಚ್ 2 -- ಎಳನೀರು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹಲವಾರು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾದ ಜನಪ್ರಿಯ ನೈಸರ್ಗಿಕ ಪಾನೀಯ ಇದು. ಎಲೆಕ್ಟ್ರೋಲೈಟ್ ಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಇದನ್ನು ಹೆಚ್ಚಾಗಿ ಹೈಡ್ರೇಶನ್, ಜೀರ್ಣಕ್ರಿಯೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕಾಗಿ ಸೇವಿಸಲಾಗುತ್ತದೆ. ಇದನ್ನು ಆರೋಗ್ಯಕರ ಪಾನೀಯವೆಂದು ವ್ಯಾಪಕವಾಗಿ ಪರಿಗಣಿಸಲಾಗಿದ್ದರೂ, ಇದರ ಅತಿಯಾದ ಸೇವನೆಯು ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೆಚ್ಚಿನ ಪೊಟ್ಯಾಸಿಯಮ್ ಮಟ್ಟಗಳು, ಜೀರ್ಣಕಾರಿ ಸಮಸ್ಯೆಗಳು ಮತ್ತು ಮೂತ್ರಪಿಂಡದ ಆರೋಗ್ಯದ ಮೇಲೆ ಅದರ ಪರಿಣಾಮವು ಗಮನಹರಿಸಲೇಬೇಕಾದ ಪ್ರಮುಖ ಅಂಶಗಳಾಗಿವೆ. ಅಲ್ಲದೆ, ಬೇಸಿಗೆಯ ಬಿಸಿ ತಣಿಸಲು ಎಳನೀರಿಗೆ ಬೇಡಿಕೆ ಕೂಡ ಹೆಚ್ಚಾಗಿದೆ, ಜನರು ಕೆಲವೊಮ್ಮೆ ಆರೋಗ್ಯಕ್ಕೆ ಉತ್ತಮ ಎಂದು ಒಮ್ಮೆಲೆ ಎರಡು ಮೂರು ಎಳನೀರು ಕುಡಿಯುವುದೂ ಇದೆ. ಹಾಗಾದರೆ ಎಷ್ಟು ಪ್ರಮಾಣದಲ್ಲಿ ಇದನ್ನು ಸೇವಿಸಿದರೆ ಒಳ್ಳೆಯದು? ಯಾರೆಲ್ಲಾ ಇದನ್ನು ಸೇವಿಸಲೇಬಾರದು? ಮುಂದಕ್ಕೆ ಓದಿ.

ಎ...