Bangalore, ಮಾರ್ಚ್ 11 -- Romantic Action Movies: ಇತ್ತೀಚೆಗೆ ಒಟಿಟಿಯಲ್ಲಿ ತಾಂಡೇಲ್‌ ಸಿನಿಮಾ ಬಿಡುಗಡೆಯಾಗಿದೆ. ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಸಾಕಷ್ಟು ಜನರಿಗೆ ಇಷ್ಟವಾಗಿದೆ. ಇದೇ ಸಮಯದಲ್ಲಿ ತಾಂಡೇಲ್‌ನಂತಹ ಇನ್ನಷ್ಟು ಸಿನಿಮಾ ನೋಡಲು ಬಯಸುವವರಿಗೆ ಇಲ್ಲಿ ಹತ್ತು ರೊಮ್ಯಾಂಟಿಕ್‌ ಸಾಹಸ ಸಿನಿಮಾಗಳ ವಿವರ ನೀಡಲಾಗಿದೆ.

ಸಂದೀಪ್ ವಂಗಾ ಬರೆದು ನಿರ್ದೇಶಿಸಿದ ತೆಲುಗು ಸಿನಿಮಾವಿದು. ವಿಜಯ್ ದೇವೇರಕೊಂಡ ಮತ್ತು ಶಾಲಿನಿ ಪಾಂಡೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಹುಲ್ ರಾಮಕೃಷ್ಣ, ಜಿಯಾ ಶರ್ಮಾ, ಸಂಜಯ್ ಸ್ವರೂಪ್, ಗೋಪಿನಾಥ್ ಭಟ್, ಕಮಲ್ ಕಾಮರಾಜು ಮತ್ತು ಕಾಂಚನಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿದೆ.

ಇದು ಕೂಡ ಜನಪ್ರಿಯ ತೆಲುಗು ಪ್ರಣಯ ಸಾಹಸ ಸಿನಿಮಾ. ಭರತ್ ಕಮ್ಮಾ ಬರೆದು ನಿರ್ದೇಶಿಸಿದ್ದಾರೆ. ವಿಜಯ್ ದೇವರಕೊಂಡ , ರಶ್ಮಿಕಾ ಮಂದಣ್ಣ ಮತ್ತು ಶ್ರುತಿ ರಾಮಚಂದ್ರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮೆಜ...