ಭಾರತ, ಜೂನ್ 2 -- Telangana Formation Day: ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ತೆಲಂಗಾಣದ ಜನರಿಗೆ ಪ್ರತಿವರ್ಷವೂ ಜೂನ್​ 2 ವಿಶೇಷ ದಿನ. ಇದು ತೆಲಂಗಾಣ ಚಳವಳಿಯ ವಿಜಯವನ್ನು ಸೂಚಿಸುತ್ತದೆ. ಭಾರತದ ಅತೀ ಕಿರಿಯ ರಾಜ್ಯವಾದ ತೆಲಂಗಾಣ ಸೃಷ್ಟಿಯಾಗಿ ಇಂದಿಗೆ 9 ವರ್ಷಗಳು ತುಂಬಿವೆ. ಭಾರತದ 29ನೇ ರಾಜ್ಯವಾಗಿ 2014ರ ಜೂನ್ 2ರಂದು‌ ಅಧಿಕೃತವಾಗಿ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂತು.

ಆಂಧ್ರಪ್ರದೇಶ (Andhra Pradesh) ರಾಜ್ಯದೊಳಗೆ ಒಂದು‌ ಪ್ರಾಂತ್ಯವಾಗಿದ್ದ ತೆಲಂಗಾಣ ಒಂದು ಪ್ರತ್ಯೇಕ ರಾಜ್ಯವಾಗಬೇಕು ಎಂಬ ಸುಮಾರು 45 ವರ್ಷಗಳ ಹೋರಾಟಕ್ಕೆ 2013ರಲ್ಲಿ ಭರವಸೆಯ ಬೆಳಕು ದೊರೆಯಿತು. ಜುಲೈ 1, 2013 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ತೆಲಂಗಾಣವನ್ನು ಪ್ರತ್ಯೇಕ ರಾಜ್ಯವಾಗಿ ರಚಿಸುವ ನಿರ್ಣಯವನ್ನು ಅಂಗೀಕರಿಸಿತು. ವಿವಿಧ ಹಂತಗಳ ನಂತರ, ತೆಲಂಗಾಣ ರಾಜ್ಯ ರಚನೆಗಾಗಿ ಫೆಬ್ರವರಿ 2014 ರಲ್ಲಿ ಆಂಧ್ರ ಪ್ರದೇಶ ಮರುಸಂಘಟನೆ ಕಾಯ್ದೆ 2014 ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಈ ಮಸೂದೆಯನ್ನು ಮಾರ್ಚ್ ...