Bangalore, ಮಾರ್ಚ್ 6 -- ಬೆಂಗಳೂರಿನ ಹೊರ ವಲಯದ ರೆಸಾರ್ಟ್‌ನಲ್ಲಿ ಸಂಸದ ಹಾಗೂ ಬಿಜೆಪಿ ಮುಖಂಡ ತೇಜಸ್ವಿ ಸೂರ್ಯ ಹಾಗೂ ಗಾಯಕಿ ಸಿವಸ್ರೀ ಸ್ಕಂದಪ್ರಸಾದ್‌ ಮದುವೆ ನಡೆಯಿತು. ಅರಮನೆ ಆವರಣದಲ್ಲಿ ಆರತಕ್ಷತೆಯೂ ನಿಗದಿಯಾಗಿದೆ.

ಆಪ್ತೇಷ್ಟರು, ಕುಟುಂಬದವರು ಮಾತ್ರ ಪಾಲ್ಗೊಂಡಿದ್ದ ಮದುವೆಯಲ್ಲಿ ತೇಜಸ್ವಿ ಹಲವು ಸಂಪ್ರದಾಯಗಳನ್ನು ಪಾಲಿಸಿದರು.

ತಮಿಳುನಾಡು ಮೂಲದವರಾದ ಸಿವಸ್ರೀ ಕರ್ನಾಟಕ ಸಂಗೀತ ಕಾಯಕಿಯಾಗಿದ್ದು ಬೆಂಗಳೂರಿನಿಂದ ಎರಡನಬೇ ಬಾರಿ ಸಂಸದರಾಗಿರುವ ತೇಜಸ್ವಿ ಅವರನ್ನು ವರಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ ಅವರು ತೇಜಸ್ವಿ ಸೂರ್ಯ ಅವರಿಗೆ ಮದುವೆ ಶುಭಾಶಯ ಕೋರಿದರು.

ಕೇಂದ್ರ ಸಚಿವ ವಿ.ಸೋಮಣ್ಣ ಕೂಡ ತೇಜಸ್ವಿ ಸೂರ್ಯ ಅವರ ಮದುವೆಗೆ ಆಗಮಿಸಿ ಶುಭ ಕೋರಿದರು.

ಮದುವೆ ಮುಂಚಿನ ಕಾರ್ಯಕ್ರಮಗಳಲ್ಲಿ ತೇಜಸ್ವಿ ಅವರ ಚಿಕ್ಕಪ್ಪ ಹಾಗೂ ಬಸವನಗುಡಿ ಶಾಸಕರಾಗಿರುವ ರವಿಸುಬ್ರಹ್ಮಣ್ಯ ಮತ್ತಿತರರು ಭಾಗಿಯಾದರು.

ಮದುವೆಗೆ ಪೂರ್ವಭಾಗಿಯಾಗಿ ನಡೆದ ಧಾರ್ಮಿಕ ಚಟುವಟಿಕೆಯಲ್ಲಿ ತೇಜಸ್ವಿ ಸೂರ್ಯ ಅವರು ಪಾಲ್ಗೊಂಡರು.

P...