Bangalore, ಮಾರ್ಚ್ 7 -- ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರೇ ಬಜೆಟ್ ತಂಡದ ನಾಯಕ. ಕರ್ನಾಟಕದಲ್ಲಿ ದಾಖಲೆಯ ಹದಿನಾರನೇ ಬಾರಿ ಬಜೆಟ್‌ ಮಂಡನೆಗೆ ಸಿದ್ದರಾಮಯ್ಯ ಅಣಿಯಾಗಿದ್ದಾರೆ. ಸತತವಾಗಿ ಮೂರು ದಶಕದಿಂದ ಅವರು ಬಜೆಟ್‌ ಮಂಡಿಸುತ್ತಾ ಬರುತ್ತಿದ್ದಾರೆ. ಈ ಬಾರಿಯೂ ಅವರೇ ಹಣಕಾಸು ಸಚಿವರಾಗಿರುವುದರಿಂದ ತಂಡ ಮುನ್ನಡೆಸಿದ್ದಾರೆ.

ಕಲಬುರಗಿ ಜಿಲ್ಲೆಯ ಅಳಂದ ಕ್ಷೇತ್ರದ ಶಾಸಕರಾಗಿರುವ ಹಿರಿಯ ನಾಯಕ ಬಿ.ಆರ್.ಪಾಟೀಲ್‌ ಅವರು ಈಗ ಯೋಜನಾ ಆಯೋಗದ ಉಪಾಧ್ಯಕ್ಷರು. ತಿಂಗಳ ಹಿಂದೆ ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ, ಹಣಕಾಸು ಸೇರಿದಂತೆ ಸಾಕಷ್ಟು ಅನುಭವ, ಜ್ಞಾನ ಇರುವ ರಾಜಕೀಯ ನೇತಾರ ಬಿ.ಆರ್.‌ಪಾಟೀಲ್‌. ಅವರು ಕೂಡ ತಂಡದಲ್ಲಿದ್ದಾರೆ.

ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ಶಾಸಕ ಬಸವರಾಜ ರಾಯರಡ್ಡಿಅವರು ಕರ್ನಾಟಕದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು. ಗ್ಯಾರಂಟಿ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಕಾರ್ಯಕ್ರಮ ರೂಪಿಸಿದವರು, ಈ ಬಾರಿಯೂ ಬಜೆಟ್‌ ತಯಾರಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.

ಕರ್ನಾಟಕದ 1991ನೇ ಬ್ಯಾಚ್‌ನ ಹಿರಿಯ ಐಎಎ...