ಭಾರತ, ಏಪ್ರಿಲ್ 13 -- Tatkal Ticket Booking: ಭಾರತೀಯ ರೈಲ್ವೆಯ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಬದಲಾವಣೆಯಾಗುತ್ತಾ? ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಈ ರೀತಿ ಚರ್ಚೆಯೊಂದು ಭಾರಿ ಗಮನಸೆಳೆದಿದೆ. ನಿತ್ಯವೂ ಕೋಟ್ಯಂತರ ಜನರು ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುತ್ತಿರುವ ಕಾರಣ ಈ ಪ್ರಶ್ನೆ ಸಹಜವಾಗಿಯೇ ವ್ಯಾಪಕವಾಗಿ ಚರ್ಚೆಗೆ ಒಳಗಾಗಿದೆ. ಇದನ್ನು ಗಮನಿಸಿದ, ತತ್ಕಾಲ್ ಅಥವಾ ಪ್ರೀಮಿಯಂ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಬದಲಾವಣೆ ಕುರಿತು ಭಾರತೀಯ ರೈಲ್ವೆ, ಐಆರ್‌ಸಿಟಿಸಿ ಏಪ್ರಿಲ್ 11 ರಂದು ಶುಕ್ರವಾರ ಪ್ರಕಟಣೆ ಹೊರಡಿಸಿದೆ.

ಸೋಷಿಯಲ್ ಮೀಡಿಯಾಗಳಲ್ಲಿ ಎಸಿ ಮತ್ತು ನಾನ್ ಎಸಿ ಕೋಚ್‌ಗಳ ತತ್ಕಾಲ್ ಟಿಕೆಟ್‌ ಬುಕಿಂಗ್ ಸಮಯವನ್ನು ಬದಲಾಯಿಸಲಾಗಿದೆ ಎಂಬ ಸುದ್ದಿ ಹರಡಿತ್ತು. ಹೀಗಾಗಿ, ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಬದಲಾವಣೆಯಾಗುತ್ತಾ? ಎಂಬ ಬಗ್ಗೆ ಪ್ರತಿಕ್ರಿಯಿಸಿರುವ ಐಆರ್‌ಸಿಟಿಸಿ, ಅಂತಹ ವರದಿಗಳು ಮತ್ತು ಪೋಸ್ಟ್‌ಗಳನ್ನು ನಿರಾಕರಿಸಿತು.

ಕೆಲವು ಪೋಸ್ಟ್‌...