ಭಾರತ, ಏಪ್ರಿಲ್ 11 -- Tanisha Kuppanda Marriage: ಬಿಗ್‌ಬಾಸ್‌ ಕನ್ನಡ ಸೀಸನ್‌ 7ರ ಸ್ಪರ್ಧಿ ತನಿಷಾ ಕುಪ್ಪಂಡ ಅವರು ಅಭಿಮಾನಿಗಳ ವಿವಿಧ ಪ್ರಶ್ನೆಗಳಿಗೆ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಉತ್ತರಿಸಿದ್ದಾರೆ. ವಿಶೇಷವಾಗಿ ತನ್ನ ಮದುವೆಗೆ ಸಂಬಂಧಪಟ್ಟ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಅಭಿಮಾನಿಗಳು ವಿವಿಧ ಸೋಷಿಯಲ್‌ ಮೀಡಿಯಾಗಳಲ್ಲಿ ಕಾಮೆಂಟ್‌ನಲ್ಲಿ ಕೇಳಿರುವ ಪ್ರಶ್ನೆಗಳಿಗೆ ಕನ್ನಡ ನಟಿ ಉತ್ತರಿಸಿದ್ದಾರೆ. ಹೆಚ್ಚು ಜನರು ಮತ್ತೆಮತ್ತೆ ಕೇಳುವ ಪ್ರಶ್ನೆಗಳಿಗೆ ತನ್ನ ಚಾನೆಲ್‌ನಲ್ಲಿ ಉತ್ತರಿಸಿದ್ದಾರೆ.

ಎಲ್ಲರನ್ನೂ ಭೇಟಿಯಾಗಲು ಕಷ್ಟವಾಗಬಹುದು. ನನ್ನನ್ನು ಕುಪ್ಪಂಡ ಸ್ಟೋರ್‌ನಲ್ಲಿ ಭೇಟಿಯಾಗಬಹುದು. ಅಲ್ಲಿ ನಾನು ಬಹುತೇಕ ಇರುವೆ. ನಾನು ಯಾರನ್ನೂ ನೇರವಾಗಿ ಭೇಟಿಯಾಗುವುದಿಲ್ಲ. ನಿಮಗೆ ಯಾರಾದರೂ ಮ್ಯೂಚುಯಲ್‌ ಇದ್ರೆ ಅವರ ಮೂಲಕ ಭೇಟಿಯಾಗಬಹುದು. ಯಾವುದಾದರೂ ಕಾರ್ಯಕ್ರಮಗಳಲ್ಲಿ ಭೇಟಿಯಾಗಬಹುದು. ಶೂಂಟಿಂಗ್‌ ಸಮಯದಲ್ಲಿಯೂ ಭೇಟಿಯಾದರೆ ಮಾತನಾಡುವೆ.

ನನ್ನನ್ನು ಬಹುತೇಕ ಕಡೆಗಳಲ್ಲಿ, ಸೋಷಿಯಲ್‌ ಮೀಡಿಯಾಗಳಲ್ಲಿ ಹೆಚ್ಚಾಗಿ...