ಭಾರತ, ಮಾರ್ಚ್ 11 -- ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ಅವರು ಶೂಟಿಂಗ್‌ ವೇಳೆ ತಲೆಸುತ್ತಿ ಬಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೋಣ ಸಿನಿಮಾದ ಶೂಟಿಂಗ್‌ ವೇಳೆ ನೀರು ತರಲು ಹೋಗುವ ವೇಳೆ ಇವರು ತಲೆ ಸುತ್ತಿ ಬಿದ್ದಿದ್ದಾರೆ. ಅಯ್ಯೋ, ಈಗ ವಿಪರೀತ ಬಿಸಿಲು. ಇಂತಹ ಸಮಯದಲ್ಲಿ ಯಾರು ಯಾವಾಗ ಬೀಳುತ್ತಾರೆ ಎನ್ನುವಂತೆ ಇಲ್ಲ. ಏಕೆಂದರೆ, ಇವರು ಕೋಣ ಸಿನಿಮಾದ ಶೂಟಿಂಗ್‌ನಲ್ಲಿ ನಿರ್ದೇಶಕರ ಅಣತಿಯಂತೆ ತಲೆ ತಿರುಗಿ ಬಿದ್ದಿದ್ದಾರೆ.

ಶೂಟಿಂಗ್‌ ವೇಳೆ ಅನೇಕ ತಮಾಷೆಯ ಘಟನೆಗಳು ನಡೆಯುತ್ತಿವೆ. ತನಿಷಾ ಕುಪ್ಪಂಡ ಬಿಂದಿಗೆ ಹಿಡಿದುಕೊಂಡು ಬರುವ ಸಮಯದಲ್ಲಿ ಚಿತ್ರತಂಡದವರ ತಮಾಷೆಗೆ ಇವರು ನಗುತ್ತಾ ಇದ್ದಾರೆ. ಈ ಸಮಯದಲ್ಲಿ ಶೂಟಿಂಗ್‌ ಸಮಯ ಆರಂಭವಾಗಿದೆ. ನಿರ್ದೇಶಕರು ಆಕ್ಷನ್‌ ಎಂದಿದ್ದಾರೆ. ತನಿಷಾ ಕುಪ್ಪಂಡ ಅವರು ಬಿಂದಿಗೆ ಹಿಡಿದುಕೊಂಡು ಬರುತ್ತಿದ್ದಾರೆ. ನಿರ್ದೇಶಕರು "ಈಗ ನೀವು ತಲೆ ಸುತ್ತು ಬಂದು ಬೀಳಬೇಕು" ಎಂದಿದ್ದಾರೆ. ಅದರಂತೆ ನಟಿ ತಲೆ ಸುತ್ತು ಬಂದಂತೆ ಬಿದ್ದಿದ್ದಾರೆ...