Chennai, ಏಪ್ರಿಲ್ 11 -- Tamil Nadu assembly elections 2026: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಎಐಎಡಿಎಂಕೆ ಒಟ್ಟಾಗಿ ಹೋರಾಡಲು ಮೈತ್ರಿ ಮಾಡಿಕೊಂಡಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಚೆನ್ನೈನಲ್ಲಿ ಈ ಘೋಷಣೆ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ನಿಟ್ಟಿನಲ್ಲಿ ಮಾತುಕತೆಗಳು ನಡೆದಿದ್ದರೂ ಪ್ರಕ್ರಿಯೆಗಳು ಅಂತಿಮವಾಗಿರಲಿಲ್ಲ. ಕಳೆದ ವಾರ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ನೀಡಿದಾಗಲೇ ಮೈತ್ರಿ ಖಚಿತ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈಗ ಅದು ಅಧಿಕೃತವಾಗಿದೆ. ಸರ್ಕಾರ ರಚನೆಯಾದ ನಂತರ ಸೀಟು ಹಂಚಿಕೆ ಮತ್ತು ಸಚಿವಾಲಯಗಳ ಹಂಚಿಕೆ ಎರಡನ್ನೂ ನಂತರ ನಿರ್ಧರಿಸಲಾಗುವುದು" ಎಂದು ಶಾ ಎಎನ್ಐಗೆ ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಆಡಳಿತಾರೂಢ ಡಿಎಂಕೆ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಧರ್ಮ, ನೀಟ್ ಮತ್ತು ತ್ರಿಭಾಷಾ ನೀತಿಯ ಸಮಸ್ಯೆಗಳನ್ನು ಎತ್ತುತ್ತಿದ...