ಭಾರತ, ಮಾರ್ಚ್ 10 -- ಡಮಾಸ್ಕಸ್: ಸಿರಿಯಾದಲ್ಲಿ ಇತ್ತೀಚೆಗೆ ನಡೆದ ಭೀಕರ ಹಿಂಸಾಚಾರದಲ್ಲಿ ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಹಾಲಿ ಅಧಿಕಾರದಲ್ಲಿರುವ ಸರ್ಕಾರದ ಪರ ನಿಷ್ಠೆ ಇರುವ ಭದ್ರತಾ ಪಡೆಗಳು ಮತ್ತು ಪದಚ್ಯುತ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರಿಗೆ ನಿಷ್ಠೆ ಇರಿಸಿರುವ ಸಮುದಾಯದ ನಡುವೆ ನಡೆದ ಘರ್ಷಣೆಯಲ್ಲಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿ ಮಾಡಿದೆ. ಮಾಜಿ ಅಧ್ಯಕ್ಷ ಅಸ್ಸಾದ್ ಅವರಿಗೆ ನಿಷ್ಠರಾಗಿದ್ದ ಅಲಾವೈಟ್ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಸರ್ಕಾರಿ ಪಡೆಗಳು ಕಳೆದ ಗುರುವಾರದಿಂದ (ಮಾರ್ಚ್ 6) "ಸೇಡು ತೀರಿಸಿಕೊಳ್ಳುವ ಹತ್ಯೆಗಳನ್ನು" ಪ್ರಾರಂಭಿಸಿದ್ದು, ಸಿರಿಯಾದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.

ಸದ್ಯಕ್ಕೆ ಸಿರಿಯಾದಲ್ಲಿ ಹಿಂಸಾಚಾರವನ್ನು ನಿಯಂತ್ರಿಸಲಾಗಿದೆ. ಸರ್ಕಾರಿ ಪಡೆಗಳು ಬಹುತೇಕ ಪ್ರದೇಶಗಳ ಮೇಲೆ ನಿಯಂತ್ರಣವನ್ನು ಮರುಸ್ಥಾಪಿಸಿವೆ. ಹಿಂಸಾಚಾರ ವರದಿಯಾಗಿರುವ ಕರಾವಳಿ ಪ್ರದೇಶಕ್ಕೆ ಹೋಗುವ ಎಲ್ಲ ರಸ್ತೆಗಳನ್ನು ಅಧಿಕಾರಿಗಳು ಮ...