Bengaluru, ಏಪ್ರಿಲ್ 5 -- ಅಧಿಕ ರಕ್ತದೊತ್ತಡ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು, ಇದನ್ನು ಎಚ್ಚರಿಕೆಯಿಂದ ನಿರ್ವಹಿಸುವ ಅಗತ್ಯವಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಶಾಖ ಮತ್ತು ನಿರ್ಜಲೀಕರಣವು ಅದರ ಪರಿಣಾಮಗಳನ್ನು ಇನ್ನಷ್ಟು ಹದಗೆಡಿಸಬಹುದು. ಹೃದಯರಕ್ತನಾಳದ ಪ್ರಯೋಜನಗಳು ಮತ್ತು ತಂಪಾಗಿಸುವ ಪರಿಣಾಮಗಳಿಗೆ ಹೆಸರುವಾಸಿಯಾದ ಈಜು ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಿಗೆ ಅತ್ಯುತ್ತಮ ವ್ಯಾಯಾಮವಾಗಿದೆ. ಆದಾಗ್ಯೂ, ಬಿರು ಬಿಸಿಲಿನ ಬೇಸಿಗೆಯಲ್ಲಿ ಈಜುವಿಕೆಗೂ ಮುನ್ನ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ, ಅದರಿಂದ ಮುಂದೆ ಸಮಸ್ಯೆಯಾಗಬಹುದು.

ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಈಜುವುದು ನಮ್ಮ ದೇಹಕ್ಕೆ ಉತ್ತಮ. ದೇಹ ತಂಪಾಗುವ ಜತೆಗೆ, ಉತ್ತಮ ವ್ಯಾಯಾಮವೂ ದೊರೆಯುತ್ತದೆ, ಪೂರ್ಣ ದೇಹಕ್ಕೆ ಅಗತ್ಯ ವ್ಯಾಯಾಮ ಲಭ್ಯವಾಗುತ್ತದೆ. ಈಜುವಿಕೆಯಿಂದ ಹಲವು ಪ್ರಯೋಜನಗಳಿವೆ. ಆದರೆ ಬೇಸಿಗೆಯಲ್ಲಿ ವಿಶೇಷವಾಗಿ ಅಧಿಕ ರಕ್ತದೊತ್ತಡ...