Bengaluru, ಫೆಬ್ರವರಿ 17 -- ಸಿಹಿ ಗೆಣಸು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹಲವು ಆರೋಗ್ಯ ಪ್ರಯೋಜನಗಳಿಂದ ಸಮೃದ್ಧವಾಗಿರುವ ಸಿಹಿ ಗೆಣಸು ತಿನ್ನಲು ಎಷ್ಟು ರುಚಿಯೋ ಅಷ್ಟೇ ಪೋಷಕಾಂಶಗಳಿಂದ ಹೇರಳವಾಗಿದೆ. ಸಿಹಿ ಗೆಣಸನ್ನು ಬೇಯಿಸಿ ಅದರಿಂದ ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಹಾಗಾದರೆ ಸಿಹಿ ಗೆಣಸನ್ನು ಬೇಯಿಸಿ ತಿನ್ನುವ ಮೊದಲು ನೀವು ಅದರ ಸಿಪ್ಪೆಯನ್ನು ಸುಲಿಯುತ್ತೀರಾ? ಸ್ವಾಸ್ಥ್ಯ ತರಬೇತುದಾರರೊಬ್ಬರು ಸಿಹಿಗೆಣಸಿನ ಜೊತೆಗೆ ಅದರ ಸಿಪ್ಪೆಯನ್ನೂ ತಿನ್ನುವುದು ಆರೋಗ್ಯಕ್ಕೆ ಹೆಚ್ಚಿನ ಲಾಭವನ್ನು ನೀಡುತ್ತದೆ ಎಂದಿದ್ದಾರೆ. ಸಿಹಿ ಗೆಣಸಿನ ಸಿಪ್ಪೆಯು ರಕ್ಷಣಾತ್ಮಕ ಕವಚದಂತೆ ಕೆಲಸ ಮಾಡುತ್ತದೆ. ಹಾಗಾದರೆ ಅದು ಯಾವೆಲ್ಲಾ ಅರೋಗ್ಯ ಪ್ರಯೋಜನಗಳನ್ನು ಹೊಂದಿದೆ? ಮುಂದಕ್ಕೆ ಓದಿ..

ಪ್ರಿಬಯಾಟಿಕ್ ಗಳು ಮತ್ತು ಫೈಬರ್ ಸಮೃದ್ಧ: ಸಿಹಿ ಆಲೂಗಡ್ಡೆ ಸಿಪ್ಪೆಗಳು ನಾರಿನಂಶದಿಂದ ಕೂಡಿವೆ, ಇದು ನಮ್ಮ ಕರುಳಿನ ಬ್ಯಾಕ್ಟೀರಿಯಾಕ್ಕೆ ಆಹಾರವನ್ನು ನೀಡಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೆಚ್ಚು ಸಮ...