ಭಾರತ, ಮೇ 10 -- Suvarna Grahamantri: ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ಇದೀಗ ವೀಕ್ಷಕರಿಗೆ ಮಧ್ಯಾಹ್ನದ ಮನರಂಜನೆಯನ್ನು ಇನ್ನಷ್ಟು ದುಪ್ಪಟ್ಟುಗೊಳಿಸಲು ಸುವರ್ಣ ಗೃಹಮಂತ್ರಿ ಎಂಬ ಹೊಸದೊಂದು ರಿಯಾಲಿಟಿ ಶೋ ಅನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಹಾಗಾದರೆ ಈ ಶೋನ ವಿಶೇಷತೆ ಏನು? ಇಲ್ಲಿದೆ ವಿವರ.

ಇದೊಂದು ವಿಭಿನ್ನ ರೀತಿಯ ರಿಯಾಲಿಟಿ ಶೋ. ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು, ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ. ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು 'ಥ್ಯಾಂಕ್ ಯು' ಅಂತನೂ ಯಾರೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ- ಹೆಂಡ್ತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಸೀರೆ, ಚಿನ್ನ, ಬೆಳ್ಳಿ ಹಾಗೂ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ ಸುವರ್ಣ ಗೃಹಮಂತ್ರಿ ಕಾರ್ಯಕ್ರಮದ ಶೈಲಿಯಾಗಿದೆ.

ಇದನ್ನೂ ಓದಿ: ಈ ಒಂದು ಕಾರಣಕ್ಕೆ ಕಳೆದ 26 ವರ್ಷಗಳಿಂದ ಬಾಲಿವುಡ್‌ನಿಂದ...