Suttur, ಜನವರಿ 28 -- ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಪಿಲಾ ತೀರದ ಧಾರ್ಮಿಕ ಹಾಗೂ ಶೈಕ್ಷಣಿಕ ಮಹತ್ವದ ಸುತ್ತೂರಿನಲ್ಲಿ ಮಂಗಳವಾರ ರಥೋತ್ಸವ ಸಡಗರದಿಂದ ನಡೆಯಿತು. ಮೈಸೂರು ದಸರಾದ ಜಂಬೂಸವಾರಿ ಮಾದರಿಯಲ್ಲಿಯೇ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಕಲಾವಿದರು ಹೆಜ್ಜೆ ಹಾಕಿದರೆ, ಗಣ್ಯರು ಹಾಗೂ ಭಕ್ತರು ಭಕ್ತಿ ಭಾವಗಳಿಂದ ತೆರನ್ನು ಎಳೆದರು. ಸಹಸ್ರಾರು ಭಕ್ತರು ಶ್ರೀ ಶಿವರಾತ್ರಿ ಶಿವಯೋಗಿಗಳ ರಥೋತ್ಸವ ಬಂದಾಗ ಹಣ್ಣು ಜವನ ಎಸೆದು ಜೈ ಶಿವರಾತ್ರೀಶ್ವರ ಎನ್ನುವ ಉದ್ಘಾರಗಳೊಂದಿಗೆ ಸಂಭ್ರಮಿಸಿದರು. ಸುತ್ತೂರಿನ ಮುಖ್ಯರಸ್ತೆಯಲ್ಲಿ ರಥೋತ್ಸವ ಹೋಗುತ್ತಿದ್ದರೆ ಮುಂದೆ ರೋಬೋಟಿಕ್‌ ಆನೆ ಹೆಜ್ಜೆ ಹಾಕುತ್ತಿದ್ದರು. ತಮಟೆ, ನಗಾರಿ ಸದ್ದು ನಿನಾದಿಸುತ್ತಲೇ ಇತ್ತು.

ಶ್ರೀ ಶಿವರಾತ್ರೀಶ್ವರ ಶಿವಯೋಗಿ ಸ್ವಾಮೀಜಿಗೆ ಅಪಾರ ಭಕ್ತರ ಜನಸ್ತೋಮ ಜಯ ಘೋಷಗಳನ್ನು ಮುಗಿಲೆತ್ತರಕ್ಕೆ ಕೂಗುತ್ತ, ತಮಟೆ, ನಗರಿ ಸದ್ದಿಗೆ ಕುಣಿದು ಕುಪ್ಪಳಿಸಿ ಶಿವಯೋಗಿಗಳ ರಥೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಶಿವಯೋಗಿ ಸ್ವಾಮೀಜಿ...', 'ಜೈ ಶಿವ...