Suttur, ಜನವರಿ 26 -- ಮೈಸೂರು ಜಿಲ್ಲೆಯ ಸೊಬಗಿನ ಸುತ್ತೂರು ಜಾತ್ರೆ ಶುರುವಾಗಿದೆ. ಆರು ದಿನಗಳ ಕಾಲ ಸುತ್ತೂರು ಜಾತ್ರೆ ಲಕ್ಷಾಂತರ ಜನರನ್ನು ಸೆಳೆಯಲಿದೆ. ಜಾತ್ರೆಗೆ ದೇಶಿತನದ ನೋಟವಿದೆ. ಹೊಸತನವನ್ನು ರೈತಾಪಿ ಜನರಿಗೆ ತೋರಿಸಿಕೊಡುವ ಪ್ರದರ್ಶನಗಳೂ ಇವೆ. ಬೆಂಡು ಬತ್ತಾಸು ತಿಂದು ಹೋಗುವ ಜತೆಗೆ ಕೆಲ ಹೊತ್ತು ಆಟವಾಡಿ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಳ್ಳುವ ದೇಸಿ ಆಟಗಳೂ ಜಾತ್ರೆಯಲ್ಲಿವೆ. ಆದರೆ ಸಾಕಷ್ಟು ಇತಿಹಾಸ ಇರುವ ಸುತ್ತೂರು ಜಾತ್ರೆಗೆ ಈ ಬಾರಿ ವಿಶೇಷ ಅತಿಥಿ ಆಗಮಿಸಿದ್ಧಾರೆ. ಆ ಅತಿಥಿ ಸುತ್ತೂರಿನ ಮಠದಿಂದ ಮುಖ್ಯ ರಸ್ತೆವರೆಗೂ ಸುತ್ತು ಹಾಕುವ ಮೂಲಕ ಆಕರ್ಷಣೆಯೂ ಆಗಿದ್ದಾರೆ. ಆದು ಶಿವ ಆನೆ. ಅಂತಿಂತಹ ಆನೆಯಲ್ಲ. ರೋಬೋಟಿಕ್‌ ಆನೆ. ಸುತ್ತೂರು ಜಾತ್ರೆಗೆ ಬಂದರೆ ನೀವು ಕೆಲ ಹೊತ್ತು ಶಿವ ಆನೆಯೊಂದಿಗೆ ಕಳೆದು ಹೋಗಬಹುದು. ಫೋಟೋ ತೆಗೆಯಿಸಿಕೊಳ್ಳಬಹುದು. ಆ ಆನೆ ನಿಮ್ಮನ್ನು ಸೊಂಡಿಲಿನಿಂದ ತಳ್ಳುವ ಇಲ್ಲವೇ ನಿಮ್ಮ ಮೇಲೆ ದಾಳಿ ಮಾಡಲು ಬರಲು ಸಾಧ್ಯವೇ ಅಲ್ಲ. ಅಷ್ಟರ ಮಟ್ಟಿಗೆ ಅದು ಯಾಂತ್ರಿಕ ಆನೆ. ಹಾಗೆಂದು ನೀವು ಅದನ್ನ...