Bengaluru, ಫೆಬ್ರವರಿ 17 -- Surya Temple in Kashi: ಪ್ರತಿಯೊಬ್ಬರ ಮನದಲ್ಲೂ ಒಮ್ಮೆ ಕಾಶಿಗೆ ತೆರಳಬೇಕೆಂಬ ಆಸೆ ಇರುತ್ತದೆ. ಮುಖ್ಯವಾಗಿ ಕಾಶಿಯಲ್ಲಿ ಮಾಘ ಮಾಸದಲ್ಲಿ ಪುಣ್ಯ ಸ್ನಾನ ಮಾಡಿದರೆ ವಿಶೇಷ ಫಲಗಳು ಲಭಿಸುತ್ತದೆ. ಆದರೆ ಕಾಶಿಗೆ ಭೇಟಿ ನೀಡಿದವರಿಗೆ ಪುಣ್ಯ ಫಲಗಳು ದೊರೆಯಬೇಕೆಂಬಲ್ಲಿ ಅಲ್ಲಿರುವ ಸೂರ್ಯ ದೇವನಿಗೆ ನಮಸ್ಕರಿಸಲೇಬೇಕು. ಬಹುತೇಕ ಧಾರ್ಮಿಕ ಕಥೆಗಳು ನಮಗೆ ಸ್ಕಂದಪುರಾಣ, ವಿಷ್ಣುಪುರಾಣ, ಶಿವಪುರಾಣ ಮತ್ತು ಮತ್ಸ್ಯ ಪುರಾಣಗಳಲ್ಲಿ ದೊರೆಯುತ್ತವೆ.

ಇದನ್ನೂ ಓದಿ: ಕೃಷ್ಣ ಜನ್ಮಭೂಮಿಯ ಮಥುರಾ ದೇವಸ್ಥಾನ ಕೆಡವಿದ್ದು ಔರಂಗಜೇಬ್‌; ಆರ್‌ಟಿಐ ಪ್ರಶ್ನೆಗೆ ಪುರಾತತ್ತ್ವ ಇಲಾಖೆ ಉತ್ತರ

ಅನೇಕ ಧಾರ್ಮಿಕ ಪುರಾಣದಲ್ಲಿ ಕಾಶಿ ಮತ್ತು ಶ್ರೀ ಸೂರ್ಯದೇವನ ನಡುವೆ ಇರುವ ಸಂಬಂಧವನ್ನು ಬಿಂಬಿಸಲಾಗಿದೆ. ನಮಗೆ ತಿಳಿದಂತೆ ಸೂರ್ಯನೆಂದರೆ ತ್ರಿಮೂರ್ತಿಗಳಾದ ಶಿವ, ಬ್ರಹ್ಮ ಮತ್ತು ವಿಷ್ಣುವಿನ ರೂಪಗಳಾಗಿವೆ. ಕಾಶಿಯಲ್ಲಿ ಇಲ್ಲದ ದೇವರುಗಳಿಲ್ಲ. ಕಾಶಿಯು ಎಲ್ಲಾ ದೇವತೆಗಳ ಆವಾಸಸ್ಥಾನವಾಗಿದೆ. ಅಪರೂಪಕ್ಕೆ ಸಿಗುವ ಯಮನ ದೇವಾಲಯವು ...