ಭಾರತ, ಮಾರ್ಚ್ 22 -- OTT Malayalam Survival Thrillers: ಸರ್ವೈವಲ್‌ ಸಿನಿಮಾಗಳು ರೋಮಾಂಚನಕಾರಿಯಾಗಿರುತ್ತವೆ. ಸಾವಿನ ದವಡೆಯಿಂದ ತಪ್ಪಿಸಿಕೊಂಡು ಬರುವ ಇಂತಹ ಕಥೆಗಳ ಹಲವು ಸಿನಿಮಾಗಳು ಭಾರತದ ಚಿತ್ರರಂಗದಲ್ಲಿ ಬಂದಿವೆ. ವಿಶೇಷವಾಗಿ ಮಲಯಾಳಂ ಭಾಷೆಯ ಹಲವು ಸರ್ವೈವಲ್‌ ಥ್ರಿಲ್ಲರ್‌ ಸಿನಿಮಾಗಳು ಜನರ ಗಮನ ಸೆಳೆದಿವೆ. ಕೆಲವು ಚಲನಚಿತ್ರಗಳು ಬಾಕ್ಸ್‌ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಪಡೆದಿವೆ. ಐದು ಮಲಯಾಳಂ ಬದುಕುಳಿಯುವ ಥ್ರಿಲ್ಲರ್ ಚಿತ್ರಗಳ ವಿವರ ಇಲ್ಲಿ ನೀಡಲಾಗಿದೆ. ಇವುಗಳಲ್ಲಿ ‌ ಅತ್ಯಂತ ಜನಪ್ರಿಯ ಮಂಜುಮೇಲ್‌ ಬಾಯ್ಸ್‌ ಸಿನಿಮಾ ಕೂಡ ಸೇರಿದೆ.

ಸರ್ವೈವಲ್‌ ಥ್ರಿಲ್ಲರ್ ಚಿತ್ರ ಮಂಜುಮ್ಮಳ್ ಬಾಯ್ಸ್ ಬಾಕ್ಸ್‌‌ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಒಟಿಟಿಯಲ್ಲಿಯೂ ಸೂಪರ್‌ ಹಿಟ್‌ ಆಗಿತ್ತು. ಇದು ಮಲಯಾಳಂ ಉದ್ಯಮದಲ್ಲಿ200 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದ ಮೊದಲ ಚಿತ್ರವಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾದ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಅಪಾಯಕಾರಿಯಾದ ಆಳವಾದ...