Bengaluru, ಮಾರ್ಚ್ 8 -- Suri Loves Sandhya Review: ಕನ್ನಡದಲ್ಲಿ ಒಂದಿಷ್ಟು ಹೊಸ ಪ್ರಯೋಗಗಳ ಜೊತೆಗೆ ಹಲವು ಹಳೆಯ ಪ್ರೇಮಕಥೆಗಳು ಸಹ ಬಿಡುಗಡೆಯಾಗುತ್ತಿವೆ. ಈ ವಾರ ಬಿಡುಗಡೆಯಾದ 'ಸೂರಿ ಲವ್ಸ್ ಸಂಧ್ಯಾ' ಚಿತ್ರವೂ ಒಂದು. ಇಲ್ಲಿ ಪ್ರೇಮಿಗಳು ಏನೆಲ್ಲಾ ಎದರಿಸುತ್ತಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ.

'ಸೂರಿ ಲವ್ಸ್ ಸಂಧ್ಯಾ' ಚಿತ್ರದ ಹೆಸರಲ್ಲೇ ಕಥೆ ಇದೆ. ಇಲ್ಲಿ ಸೂರಿ (ಅಭಿಮನ್ಯು ಕಾಶೀನಾಥ್‍) ಎಂಬ ಬಡ ಚಿತ್ರಕಲಾವಿದನಿದ್ದಾನೆ. ಸಂಧ್ಯಾ (ಅಪೂರ್ವ) ಎಂಬ ಶ್ರೀಮಂತ ಮತ್ತು ಅಷ್ಟೇ ಸಾತ್ವಿಕ ಹುಡುಗಿ ಇದ್ದಾಳೆ. ಪರಮ ಶಿವಭಕ್ತೆಯಾದ ಸಂಧ್ಯಾಗೆ ಸೂರಿ ಮೇಲೆ ಲವ್‍ ಆಗುತ್ತದೆ. ಆದರೆ, ಅವರ ಮಧ್ಯೆ ಅಂತಸ್ತು ಅಡ್ಡ ಬರುತ್ತದೆ. ಈ ಪ್ರೀತಿಗೆ ಸಂಧ್ಯಾಳ ಅಣ್ಣ ಗಡ್ಡ ವಿಜಿ (ಪ್ರತಾಪ್‍ ನಾರಾಯಣ್‍) ಅಡ್ಡ ಬರುತ್ತಾನೆ. ಅವನಿಂದ ತಪ್ಪಿಸಿಕೊಂಡು ಹೋಗುವ ಪ್ರೇಮಿಗಳು ದೂರದೂರಿಗೆ ಹೋಗಿ ಮದುವೆಯಾಗುವುದಕ್ಕೆ ನಿಶ್ಚಯಿಸುತ್ತಾರೆ. ಈ ಪ್ರಯಾಣದಲ್ಲಿ ಅವರು ಏನೆಲ್ಲಾ ಅನುಭವಿಸುತ್ತಾರೆ ಎಂದು ಗೊತ್ತಾಗಬೇಕಿದ್ದರೆ ಚಿತ್ರ ನೋಡಬೇಕು...