ಭಾರತ, ನವೆಂಬರ್ 29 -- ನವದೆಹಲಿ: ಸುಪ್ರೀಂಕೋರ್ಟ್‌ನ ಕೊಲಿಜಿಯಂ ಪದೋನ್ನತಿಗೆ ಶಿಫಾರಸು ಮಾಡಿರುವ 10 ನ್ಯಾಯಮೂರ್ತಿಗಳ ಹೆಸರುಗಳಿಗೆ, ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿಲ್ಲ ಎನ್ನಲಾಗಿದೆ. ನವೆಂಬರ್ 25 ರಂದು ಹಿಂದಿರುಗಿದ ಕಡತಗಳಲ್ಲಿ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿಎನ್ ಕಿರ್ಪಾಲ್ ಅವರ ಪುತ್ರ ಹಾಗೂ ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರ ಹೆಸರೂ ಸೇರಿದೆ.

ಸುಪ್ರೀಂಕೋರ್ಟ್ ಕೊಲಿಜಿಯಂ ಪುನರುಚ್ಚರಿಸಿದ ಕೆಲವು‌ ನ್ಯಾಯಮೂರ್ತಿಗಳ ಹೆಸರುಗಳನ್ನು, ಕೇಂದ್ರ ಸರ್ಕಾರ ಹಿಂತಿರುಗಿಸಿದೆ. ಕೇಂದ್ರದ ಈ ನಡೆಯನ್ನು ಸುಪ್ರೀಂಕೋರ್ಟ್‌ನ ಕೆಲವು ಹಿರಿಯ ವಕೀಲರು ವಿರೋಧಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸೌರಭ್ ಕಿರ್ಪಾಲ್, ನನ್ನ ಲೈಂಗಿಕತೆ ಕಾರಣಕ್ಕೆ ಕೇಂದ್ರ ಸರ್ಕಾರ ನನ್ನ ಪದೋನ್ನತಿಯನ್ನು ತಡೆಹಿಡಿದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರವು ಬಹಿರಂಗವಾಗಿ ಸಲಿಂಗಕಾಮಿ ವ್ಯಕ್ತಿಯನ್ನು ಸುಪ್ರೀಂಕೋರ್ಟ್‌ ಬೆಂಚ್‌ಗೆ ನೇಮಿಸಲು ಹಿಂದೇಟು ಹಾಕುತ್ತಿದೆ ಎಂದು 50 ವರ್ಷದ ಸೌರಭ್ ಕಿರ್ಪಾಲ್ ಆರೋಪಿಸಿದ್ದಾರೆ. 2017 ರಿಂ...