ಭಾರತ, ಮಾರ್ಚ್ 19 -- Sunitha Williams: ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿ ಅನಿರೀಕ್ಷಿತ ಒಂಬತ್ತು ತಿಂಗಳ(286 ದಿನಗಳ) ನಿರಂತರ ವಾಸದ ನಂತರ ಭಾರತೀಯ ಕಾಲಮಾನದಂತೆ ಬುಧವಾರ ಬೆಳಗಿನ ಜಾವ 3:27ಕ್ಕೆ ಭೂಮಿಗೆ ಮರಳಿದರು. ನಾಸಾ ಗಗನಯಾತ್ರಿಗಳು, ಅಮೆರಿಕದ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಅವರೊಂದಿಗೆ ಮಂಗಳವಾರ ಸಂಜೆ 5.57 ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿದರು. ಅಮರಿಕದ ಫ್ಲೋರಿಡಾಕ್ಕೆ ಬಂದ ಸುನೀತಾ ಹಾಗೂ ಇತರರನ್ನು ಸ್ವಾಗತಿಸಲಾಯಿತು. ಭೂಮಿಗೆ ಮರಳುತ್ತಿದ್ದಂತೆ ಅವರ ಮೊದಲ ನಗು ಹಲವರಲ್ಲಿ ಸಂತಸವನ್ನು ಉಂಟು ಮಾಡಿತು. ಅವರು ಭೂಮಿಗೆ ಬಂದ ನಂತರದ ಮೊದಲ ಫೋಟೋ ಕೂಡ ವೈರಲ್‌ ಆಗಿದೆ.

ಅವರ ಸ್ಪೇಸ್ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸೂಲ್, 'ಫ್ರೀಡಂ' ಭೂಮಿಯ ವಾತಾವರಣದ ಮೂಲಕ ಹಾದು, ಸುಮಾರು 3,000 ಡಿಗ್ರಿ ಫ್ಯಾರನ್ಹೀಟ್ (1650 ಡಿಗ್ರಿ ಸೆಲ್ಸಿಯಸ್) ತಾಪಮಾನವನ್ನು ಸಹಿಸಿಕೊಂಡು, ನಂತರ ಟಲ್ಲಾಹಸ್ಸಿ ಬಳಿಯ ಮೆಕ್ಸಿಕ...