ಭಾರತ, ಮಾರ್ಚ್ 19 -- Who Is Sunita Williams' Husband?: ಒಂಬತ್ತು ತಿಂಗಳು ಅಂತರಿಕ್ಷ ನಿಲ್ದಾಣದಲ್ಲಿ ಕಳೆದು ಭೂಮಿಗೆ ಸುನೀತಾ ವಿಲಿಯಮ್ಸ್ ಹಿಂತುರುಗಿದ್ದಾರೆ. ನಾಸಾದ ಈ ಗಗನಯಾನಿ ಜಾಗತಿಕ ಐಕಾನ್‌. ಅಂತರಿಕ್ಷದ ಕುರಿತು ಆಸಕ್ತಿ ಉಳ್ಳುವರಿಗೆ ಇವರು ಸ್ಪೂರ್ತಿದಾಯಕರು ಎಂದರೆ ತಪ್ಪಾಗದು. ಪ್ರತಿ ವ್ಯಕ್ತಿಯ ಯಶಸ್ಸಿನ ಹಿಂದೆ ಹೆಣ್ಣು ಇರುತ್ತಾಳೆ ಎಂಬ ಮಾತು ಜನಜನಿತ. ಸುನೀತಾ ವಿಲಿಯಮ್ಸ್ ಯಶಸ್ಸಿನ ಹಿಂದೆ ಮಾತ್ರ ಗಂಡು ಅಥವಾ ಗಂಡ ಇದ್ದಾರೆ ಎಂದರೆ ತಪ್ಪಾಗದು. ಈಕೆಯ ಸಾಧನೆಯ ಹಿಂದೆ ಮೈಕೆಲ್ ಜೆ. ವಿಲಿಯಮ್ಸ್ ಬೆಂಬಲವಿದೆ. ಒಂಬತ್ತು ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದು ಭೂಮಿಗೆ ಸುನೀತಾ ಹಿಂತುರುಗಿದ ಸಮಯದಲ್ಲಿ ಮೈಕಲ್‌ ಅವರ ಹಿನ್ನೆಲೆ, ಅವರ ಪ್ರೇಮಕಥೆಯನ್ನು ತಿಳಿಯೋಣ.

ಮೈಕೆಲ್ ಜೆ. ವಿಲಿಯಮ್ಸ್ ಅಮೆರಿಕದ ಮಾರ್ಷಲ್‌. ಕಾನೂನು ಜಾರಿ ಮತ್ತು ನಾಯಾಂಗದ ರಕ್ಷಣೆಯ ಹುದ್ದೆಯಲ್ಲಿದ್ದಾರೆ. ಇದಕ್ಕೂ ಮೊದಲು ಇವರು ಹೆಲಿಕಾಪ್ಟರ್‌ ಪೈಲಟ್‌ ಆಗಿದ್ದರು. ವಿಶ್ವದ ಅತ್ಯಂತ ಪ್ರಸಿದ್ಧ ಗಗನಯಾತ್ರಿಗಳಲ್ಲಿ ಒ...