Gujarat, ಮಾರ್ಚ್ 19 -- Sunita Williams: ಇಡೀ ಜಗತ್ತೇ ಮೆಚ್ಚುತ್ತಿರುವ ಸುನೀತಾ ವಿಲಿಯಮ್ಸ್‌ ನಮ್ಮ ಕುಟುಂಬದವರು ಎನ್ನುವುದೇ ಹೆಮ್ಮೆಯ ಸಂಗತಿ. ಅವರ ತಂದೆ ದೀಪಕ್‌ ಪಾಂಡ್ಯ ಅವರು ಈಗಲೂ ಗುಜರಾತ್‌ನೊಂದಿಗೆ ನಂಟು ಹೊಂದಿದ್ದಾರೆ. ಸಂಬಂಧಿಕರ ಜತೆಗೆ ಆಗಾಗ ಮಾತನಾಡುತ್ತಿರುತ್ತಾರೆ. ಸುನೀತಾ ವಿಲಿಯಮ್ಸ್‌ ಸದ್ಯದಲ್ಲೇ ಭಾರತಕ್ಕೆ ಬರುತ್ತಾರೆ. ಅದು ಬಲು ಬೇಗನೇ ಆಗಬಹುದು ಎನ್ನುವ ನಿರೀಕ್ಷೆಯಂತೂ ಇದೆ. ಅವರು ಭಾರತಕ್ಕೆ ಬಂದರೆ ಅವರೊಂದಿಗೆ ಪ್ರವಾಸಕ್ಕೆ ಹೋಗಿ ಅವರೊಂದಿಗೆ ಕ್ಷಣಗಳನ್ನು ಕಳೆಯುವ ಆಸೆಯಿದೆ. ಜತೆಗೆ ಅವರು ಒಂಬತ್ತು ತಿಂಗಳುಗಳ ಕಾಲ ಉಳಿದಿದ್ದ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಮೋಸಾವೇ ಅವರ ನಿತ್ಯದ ಊಟ ಆಗಿತ್ತು. ಅವರು ಭಾರತಕ್ಕೆ ಬಂದರೆ ಖಂಡಿತಾ ಅವರೊಂದಿಗೆ ಸಮೋಸಾ ಪಾರ್ಟಿಯನ್ನು ಮಾಡುತ್ತೇವೆ.

ಜಗತ್ತಿನ ಗಮನ ಸೆಳೆದಿರುವ ಭಾರತದ ಸಂಜಾತೆ, ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಕುರಿತು ಗುಜರಾತ್‌ನಲ್ಲಿ ನೆಲೆಸಿರುವ ಅವರ ಸಂಬಂಧಿ ಫಲ್ಗುಣಿ ಪಾಂಡ್ಯ ಹೀಗೆ ಹೇಳುತ್ತಿರುವಾಗ ಅವರ ಮೊಗದಲ್ಲಿ ಸಂತ...