Bengaluru, ಮಾರ್ಚ್ 29 -- ಬೇಸಿಗೆ ಕಾಲದ ಉರಿಬಿಸಿಲಿನ ದಿನಗಳು ಪ್ರಾರಂಭವಾಗಿವೆ. ತಾಪಮಾನದ ಏರಿಕೆಯಿಂದ ತ್ವಚೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿಧಾನವಾಗಿ ಕಾಣಿಸಿಕೊಳ್ಳತೊಡಗಿದೆ. ಸನ್‌ಸ್ಕ್ರೀನ್‌ ಹಚ್ಚಿಕೊಂಡೇ ಮನೆಯಿಂದ ಹೊರಹೋಗುವ ದಿನಗಳು ಪ್ರಾರಂಭವಾಗಿವೆ. ಒಂದು ವೇಳೆ ಸನ್‌ಸ್ಕ್ರೀನ್‌ ಲೋಷನ್‌ ಬಳಸದೇ ಬಿಸಿಲಿನಲ್ಲಿ ಓಡಾಡಿದರೆ ಚರ್ಮಕ್ಕೆ ಹಾನಿಯಾಗುವುದು ಖಂಡಿತ. ಆದರೆ ಸನ್‌ಸ್ಕ್ರೀನ್‌ ಬಳಸಿಯೂ ಬಹಳ ಸಮಯದವರೆಗೆ ಬಿಸಿಲಿನಲ್ಲಿ ಓಡಾಡುವ ಸಂದರ್ಭದಲ್ಲಿ ಅದು ಬಿಸಿಲಿನಿಂದ ರಕ್ಷಣೆ ಒದಗಿಸದೇ ಇರಬಹುದು. ಗಂಟೆಗಟ್ಟಲೆ ಬಿಸಿಲಿನಲ್ಲಿದ್ದರೆ ಅದರಿಂದ ಚರ್ಮ ಬಿಸಿಯಾಗುವುದು, ಸುಡುವುದು ಮತ್ತು ಕೆಂಪು ಗುಳ್ಳೆಗಳಾಗುವುದು ಮುಂತಾದವು ಕಾಣಿಸಿಕೊಳ್ಳಬಹುದು. ಇದನ್ನು ಸನ್ ಬರ್ನ್ ಎಂದು ಕರೆಯಲಾಗುತ್ತದೆ. ಇದು ಚರ್ಮದ ಕಿರಿಕಿರಿಯನ್ನು ಉಂಟುಮಾಡುತ್ತದೆ. ಇದಕ್ಕೆ ಮನೆಯಲ್ಲಿಯೇ ಸುಲಭದ ಚಿಕಿತ್ಸೆ ಮಾಡಿಕೊಳ್ಳಬಹುದಾಗಿದೆ. ಬಿಸಿಲಿನ ಬೇಗೆಯನ್ನು ಶಮನಗೊಳಿಸಿ, ಉರಿಯೂತವನ್ನು ಕಡಿಮೆ ಮಾಡಲು ಅಲೋವೆರಾ ಪ್ರಯೋಜನಕಾರಿಯಾಗಿದೆ. ಅಲೋವೆರಾ ತ್...