Bengaluru, ಏಪ್ರಿಲ್ 26 -- ಸೂರ್ಯ ಶುಕ್ರ ಸಂಯೋಗ: ಗ್ರಹಗಳು ಆಗ್ಗಾಗ್ಗೆ ತಮ್ಮ ಸ್ಥಾನವನ್ನು ಬದಲಿಸುತ್ತವೆ. ಕೆಲವೊಮ್ಮೆ 2 ಅಥವಾ ಅದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗಗೊಳ್ಳುತ್ತವೆ. ಇದರಿಂದಾಗ ವಿವಿಧ ಯೋಗಗಳು ರೂಪುಗೊಳ್ಳುತ್ತವೆ. ಇದೀಗ ಸೂರ್ಯ ಹಾಗೂ ಶುಕ್ರ ಕೂಡಾ ಸಂಯೋಜನೆಗೊಂಡಿದ್ದು ಇದರಿಂದ ವಿವಿಧ ರಾಶಿಚಕ್ರದ ಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಅದೃಷ್ಟ ಒಲಿದು ಬರಲಿದೆ.

ಸಂಪತ್ತು ಮತ್ತು ಐಷಾರಾಮದ ಅಧಿಪತಿ ಶುಕ್ರನು ಏಪ್ರಿಲ್‌ 24ರ ರಾತ್ರಿ 11.58 ಕ್ಕೆ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಅಲ್ಲಿ ಗ್ರಹಗಳ ರಾಜನಾದ ಸೂರ್ಯನು ಆಗಲೇ ಸಂಚರಿಸುತ್ತಿದ್ದಾನೆ. ಮೇಷ ರಾಶಿಯಲ್ಲಿ ಸೂರ್ಯ-ಶುಕ್ರ ಸಂಯೋಜನೆಯು ಕೆಲವು ರಾಶಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ವೃತ್ತಿಯಲ್ಲಿ ಧನಾತ್ಮಕ ಬದಲಾವಣೆಗಳಾಗಲಿವೆ. ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅಪೇಕ್ಷಿತ ಯಶಸ್ಸನ್ನು ಗಳಿಸುತ್ತಾರೆ. ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ. ಮೇಷ ರಾಶಿಯಲ್ಲಿ ಸೂರ್...