ಭಾರತ, ಮಾರ್ಚ್ 11 -- ಗ್ರಹಗಳು ನಿಗದಿತ ಸಮಯದಲ್ಲಿ ರಾಶಿಚಕ್ರಗಳನ್ನು ಬದಲಾಯಿಸುವುದು ಜ್ಯೋತಿಷ್ಯದಲ್ಲಿ ಪ್ರಾಮುಖ್ಯವನ್ನು ನೀಡಲಾಗುತ್ತದೆ. ಇದೇ ಮಾರ್ಚ್ 14 ರ ಶುಕ್ರವಾರ ಸಂಜೆ 6.00 ಘಂಟೆಗೆ ಸೂರ್ಯನು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಏಪ್ರಿಲ್ 13ರವರೆಗೆ ಮೀನ ರಾಶಿಯಲ್ಲಿ ಸಂಚರಿಸುತ್ತಾನೆ. ಮೀನ ರಾಶಿಯ ಅಧಿಪತಿಯು ಗುರು. ರವಿಗೆ ಈ ರಾಶಿಯು ಮಿತ್ರ ಕ್ಷೇತ್ರ ಆಗುತ್ತದೆ. ರವಿ ಮತ್ತು ಗುರು ಗ್ರಹಗಳು ಪರಸ್ಪರ ಮಿತ್ರರಾಗುತ್ತಾರೆ. ರವಿಯ ಜೊತೆಯಲ್ಲಿ ಮುಖ್ಯವಾಗಿ ಶುಕ್ರ ಮತ್ತು ರಾಹು ಗ್ರಹಗಳು ಸ್ಥಿತರಾಗಿದ್ದಾರೆ. ಶುಕ್ರ ಮತ್ತು ಗುರುಗಳ ನಡುವೆ ಪರಿವರ್ತನ ಯೋಗವಿದೆ. ಇದರಿಂದ ದಿನನಿತ್ಯದ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತವೆ.

ರವಿಯ ಜೊತೆಯಲ್ಲಿ ರಾಹು ಇರುವ ಕಾರಣ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ರಾಜಕಾರಣಿಗಳ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ. ಉನ್ನತ ಮಟ್ಟದ ರಾಜಕಾರಣಿಗಳು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಾರೆ. ರಾಜಕೀಯ ವಲಯದಲ್ಲಿ ದಿಢೀರ್ ಬದಲಾವಣೆಗಳು ಉಂಟಾಗಲಿವೆ. ಈ ಅವಧಿ...