Dandeli, ಮಾರ್ಚ್ 14 -- ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ಸೆರಗಿನ ಕಾಳಿ ನದಿ ತೀರ ಎಂದರೆ ಅದು ಹಸಿರು ಸ್ವರ್ಗ. ಕಾಳಿ ನದಿ ಸೃಷ್ಟಿಸಿರುವ ವಾತಾವರಣ ಎಂತಹವರ ಮೈಮನಗಳನ್ನು ಪುಳಕಿತಗೊಳಿಸುತ್ತದೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಸಮೀಪದಲ್ಲಿಯೇ ಹರಿಯುವ ಕಾಳಿ ನದಿ ಸಾಹಸ ಕ್ರೀಡೆ ಹಾಗೂ ಮನರಂಜನಾ ಚಟುವಟಿಕೆಗಳಿಗೆ ಹೆಸರುವಾಸಿ.

ಕರ್ನಾಟಕ ಮಾತ್ರವಲ್ಲದೇ ಭಾರತದ ನಾನಾ ಭಾಗಗಳಿಂದಲೂ ಪ್ರವಾಸಿಗರು ದಾಂಡೇಲಿ ಪ್ರವಾಸಕ್ಕೆ ಆಗಮಿಸುತ್ತಾರೆ

ಅದರಲ್ಲೂ ದಾಂಡೇಲಿ ಕಾಳಿ ನದಿಯ ರಿವರ್‌ ರಾಫ್ಟಿಂಗ್‌ ಎನ್ನುವ ಚಟುವಟಿಕೆಯಂತೂ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಪ್ರವಾಸೋದ್ಯಮ ಇಲಾಖೆಯ ಸುಪರ್ದಿಯಲ್ಲಿ ದಾಂಡೇಲಿಯಲ್ಲಿ ರಿವರ್‌ ರಾ‍ಫ್ಟಿಂಗ್‌ ನಡೆಸಿಕೊಂಡು ಬರಲಾಗುತ್ತಿದೆ.

ಇದೊಂದು ರೀತಿ ದೋಣಿ ವಿಹಾರ. ಒಂದು ದೋಣಿಯಲ್ಲಿ ಆರೇಳು ಮಂದಿ ಕುಳಿತು ತಾವೇ ಹುಟ್ಟು ಹಾಕುತ್ತಾ ಹೋಗುವ ವಿಶಿಷ್ಟ ಮನರಂಜನಾ ಚಟುವಟಿಕೆ.

ಅದರಲ್ಲೂ ಹರಿಯುತ್ತಿರುವ ನದಿಯ ನಡುವೆ ಹಾಗೂ ತಿರುವಿನಲ್ಲಿ ...