Talkad, ಮಾರ್ಚ್ 10 -- ತಲಕಾಡು ಎನ್ನುವ ಹೆಸರು ಕೇಳಿದ ತಕ್ಷಣ ನೆನಪಾಗೋದು ಮರಳು. ಕಾವೇರಿ ನದಿ ತೀರ. ಅಂತಹ ವಿಶೇಷತೆಯನ್ನು ಈ ತಾಣ ಹೊಂದಿದೆ.

ಗಜಾರಣ್ಯ ಎಂದು ಕರೆಯಿಸಿಕೊಳ್ಳುತ್ತಿದ್ದ ತಲಕಾಡು ಪಂಚಲಿಂಗ ದೇಗುಲಗಳಿರುವ ಊರು ಹೌದು. ತಲಕಾಡು ಗ್ರಾಮಕ್ಕೆ ತನ್ನದೇ ಆದ ಇತಿಹಾಸವಿದೆ.

ತಲಕಾಡು ಗ್ರಾಮಕ್ಕೆ ಹೊಂದಿಕೊಂಡಂತೆ ಹರಿಯುವ ಕಾವೇರಿ ನದಿ ಇಲ್ಲಿ ಮರಳಿನ ರಾಶಿಯನ್ನೇ ಸೃಷ್ಟಿಸಿದೆ. ಮರಳು, ಜಲರಾಶಿ ಹಾಗೂ ಹಸಿರು ಸೊಬಗು ನೋಡುವುದೇ ಚೆಂದ.

ತಲಕಾಡು ಮರಳಾಗಿ ಮಾಲಂಗಿ ಮಡುವಾಗಿ ಮೈಸೂರು ಮಹಾರಾಜರ ಮಕ್ಕಳಿಗೆ ಮಕ್ಕಳಾಗದಿರಲಿ ಎನ್ನುವ ದೊಡ್ಡ ಐತಿಹ್ಯವೇ ಈ ಊರಿಗೆ ಇದೆ.

ಇವೆಲ್ಲ ವಿಶೇಷಗಳ ನಡುವೆ ಕಾವೇರಿ ನದಿ ತೀರ ಪ್ರವಾಸಿಗರಿಗೆ ತಮ್ಮ ಒಡಲ ಮೂಲಕ ನೈಸರ್ಗಿಕ ತಾಣವಾಗಿಯೂ ಮಾರ್ಪಟ್ಟಿದೆ.

ಒಂದು ದಿನ ಪ್ರವಾಸಕ್ಕೆ ಕುಟುಂಬ ಇಲ್ಲವೇ ಸ್ನೇಹಿತರೊಡಗೆ ಆಗಮಿಸಿ ಕಳೆಯಲು ಇದು ಅತ್ಯುತ್ತಮ ತಾಣ. ಅಂತಹ ನೀರಿನ ವಾತಾವರಣ ಇಲ್ಲಿದೆ.

ನದಿಯಲ್ಲಿ ಆಟವಾಡಿ ದೋಣಿಯಲ್ಲಿ ವಿಹಾರ ಮಾಡುವ ಅನುಭವವೇ ಬೇರೆ. ತಲಕಾಡಿನ ತೆಪ್ಪಗಳು ನಿಮ್ಮ ಸೇವೆಗೆ ಸ...