Mysuru, ಏಪ್ರಿಲ್ 20 -- ಶತಮಾನಗಳಷ್ಟು ಹಳೆಯಾದ ಕಾವೇರಿ ನದಿ ತೀರದ ಮುಡುಕುತೊರೆ, ಅಲ್ಲಿನ ದೇವಸ್ಥಾನ, ಸುತ್ತಮುತ್ತಲ ನೋಟ ಎಂತಹ ಪ್ರವಾಸಿಗರ ಮನ ಸೆಳೆಯುತ್ತದೆ.

ಸುಮಾರು ಮೂರು ನೂರಕ್ಕೂ ಅಧಿಕ ಇರುವ ಮೆಟ್ಟಿಲುಗಳನ್ನು ಏರಿಕೊಂಡು ಹೋದರೆ ಸಿಗುವುದೇ ಬೆಟ್ಟದಲ್ಲಿರುವ ಮುಡುಕುತೊರೆ ಭ್ರಮರಾಂಭ ಸಹಿತ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ.

ಬೇಸಿಗೆ ಇರುವುದರಿಂದ ದೇಗುಲದ ಮೆಟ್ಟಿಲುಗಳನ್ನು ಏರಿಕೊಂಡು ಹೋದಲು ಮೇಲ್ಛಾವಣಿ ವ್ಯವಸ್ಥೆಯನ್ನು ಮಾಡಲಾಗಿದೆ. ಮೈಸೂರು, ಚಾಮರಾಜನಗರ, ಕೊಳ್ಳೇಗಾಲ,.ಮಳವಳ್ಳಿ ಮಾರ್ಗವಾಗಿ ಇಲ್ಲಿಗೆ ಬರಲು ವ್ಯವಸ್ಥೆಯಿದೆ.

ಬೆಟ್ಟದ ಮೇಲಿದೆ ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ಭ್ರಮರಾಂಬಿಕ ದೇವಾಲಯ. ಇಲ್ಲಿ ಮಲ್ಲಿಕಾರ್ಜುನನಿಗೆ ನಿತ್ಯ ಪೂಜೆಗಳು ನೆರವೇರುತ್ತವೆ.

ಮಲ್ಲಿಕಾರ್ಜುನನ ಜತೆಯಲ್ಲಿ ಭ್ರಮರಾಂಭ ಕೂಡ ಇಲ್ಲಿನ ಆಕರ್ಷಣೆ, ಮಹಾಭಾರತ ಕಾಲದಲ್ಲಿ ಅರ್ಜುನ ಅಜ್ಞಾತವಾಸದಲ್ಲಿದ್ದ ಸಂದರ್ಭದಲ್ಲಿ ಈ ಮಾರ್ಗವಾಗಿ ಸಂಚರಿಸುವಾಗ ಮಲ್ಲಿಕಾ ಎಂಬ ಪುಷ್ಪದಿಂದ ಶಿವಲಿಂಗಕ್ಕೆ ಅರ್ಚನೆ ಮಾಡಿದ್ದ. ಅದಕ್ಕಾಗಿಯೇ ಈ ದೇವರ...