Mysuru, ಏಪ್ರಿಲ್ 6 -- ಮೈಸೂರು ಜಿಲ್ಲೆಯ ಕೆಆರ್‌ನಗರ ಪಟ್ಟಣದಿಂದ ಸುಮಾರು ಹದಿನೈದು ಕಿ.ಮಿ. ದೂರದಲ್ಲಿದೆ ಕಪ್ಪಡಿ ಕ್ಷೇತ್ರ. ಕಾವೇರಿ ತೀರದ ಈ ಪಟ್ಟ ಕ್ಷೇತ್ರ ತನ್ನದೇ ಆದ ಮಹತ್ವ ಹೊಂದಿದೆ.

ಮೈಸೂರು ಜಿಲ್ಲೆ ಕೃಷ್ಣರಾಜನಗರ ('ಎಡತೊರೆ' ಇದರ ಹಳೆಯ ಹೆಸರು) ಸಮೀಪ ಹೆಬ್ಬಾಳು ಗ್ರಾಮಕ್ಕೆ ಸಮೀಪದ ಇರುವ ಕಾವೇರಿ ನದಿ ದಡದಲ್ಲಿರುವ ಈ ಕಪ್ಪಡಿ ಕ್ಷೇತ್ರ ಮಂಟೇಸ್ವಾಮಿ ಒಕ್ಕಲುಗಳ ಪ್ರಸಿದ್ಧ ಶ್ರದ್ಧಾ ಕೇಂದ್ರಗಳಲ್ಲೊಂದು.

ಮಂಟೇಸ್ವಾಮಿ ಪರಂಪರೆಯ ಜಾತ್ರೆ, ಹಬ್ಬ, ಆಚರಣೆಗಳ ಮೂಲಕ ಇಂದಿಗೂ ಆ ಸಂತರ ಶ್ರದ್ಧಾಕೇಂದ್ರಗಳಲ್ಲಿ, ಊರು ಕೇರಿಗಳಲ್ಲಿ ಈ ಕಾವ್ಯ ಮತ್ತು ಸಂಸ್ಕೃತಿಯ ಧಾರೆ ಹರಿಯುತ್ತಲೇ ಇದೆ. ಹೀಗೆ ಕಾವ್ಯ, ಸಂಸ್ಕೃತಿ ಹರಿದು ವಾಲಾಡುವ ನೀಲಗಾರರ ಶ್ರದ್ಧಾಕೇಂದ್ರಗಳಲ್ಲಿ ಕಪ್ಪಡಿ ಕ್ಷೇತ್ರವೂ ಒಂದು.

ಕಪ್ಪಡಿ ಕ್ಷೇತ್ರದಲ್ಲಿ ಮಂಟೇಸ್ವಾಮಿ ಶಿಶು ಮಕ್ಕಳೆನಿಸಿದ ರಾಚಪ್ಪಾಜಿ, ಚೆನ್ನಾಜಮ್ಮ ಐಕ್ಯವಾಗಿದ್ದು ಅವರ ಗದ್ದಿಗೆಗಳಿವೆ. ಇ

ಮಂಟೇಸ್ವಾಮಿ ಮಠ ಮಳವಳ್ಳಿ ತಾಲ್ಲೂಕಿನ ಬೊಪ್ಪಗೌಡನಪುರದಲ್ಲಿದೆ. ಈ ಸಂಪ್ರದಾಯದ ಮತ್ತೊಂದು ಮಠ ...