Bangalore, ಫೆಬ್ರವರಿ 21 -- ಬೆಂಗಳೂರು ನಗರದ ಹೃದಯಭಾಗದಲ್ಲಿರುವ 1.5 ಚದರ ಕಿ.ಮೀ ಗಿಂತಲೂ ಹೆಚ್ಚು ಹರಡಿರುವ ಹಲಸೂರು ಕೆರೆ ವರ್ಷಪೂರ್ತಿ ನೀರಿನಿಂದ ತುಂಬಿರುತ್ತದೆ. ಬೇಸಿಗೆಯಲ್ಲಿ ಕೊಂಚ ನೀರು ಕಡಿಮೆಯಾದರೂ ಜಲದ ವಾತಾವರಣ ಚೆನ್ನಾಗಿಯೇ ಇರುತ್ತದೆ.ಬೆಂಗಳೂರಿನ ಅತ್ಯಂತ ಹಳೆಯ ಮತ್ತು ದೊಡ್ಡ ಕೆರೆಗಳಲ್ಲಿ ಇದೂ ಒಂದು.

ಮೈಸೂರಿನ ಕಾರಂಜಿ ಕೆರೆ ಕೂಡ ವಿಶಾಲವಾಗಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಡಿಯಲ್ಲಿರುವ ಈ ಕೆರೆ ಮೈಸೂರು ಮೃಗಾಲಯ ಪಕ್ಕದಲ್ಲಿಯೇ ಇದೆ. ಇಲ್ಲಿ ಬೋಟಿಂಗ್‌, ಚಿಟ್ಟೆ ಪಾರ್ಕ್‌, ಪಕ್ಷಿಗಳ ಲೋಕ ಚೆನ್ನಾಗಿದೆ. ಹಸಿರು ವಾತಾವರಣ ಮುದ ನೀಡುತ್ತದೆ.

ಗದಗ ಜಿಲ್ಲೆಯ ಮಾಗಡಿ ಕೆರೆ ಕೂಡ ಹಳೆಯದು ಹಾಗೂ ವಿಶಾಲವಾಗಿದೆ. ವಿದೇಶಿ ಹಕ್ಕಿಗಳಿಗೆ ಆತಿಥ್ಯ ನೀಡುವ ಕೆರೆಯಿದು. ಹಾವೇರಿಯಿಂದ ಗದಗಕ್ಕೆ ಹೋಗುವ ಮಾರ್ಗದಲ್ಲಿ ಮಾಗಡಿ ಕೆರೆ ಸಿಗುತ್ತದೆ. ಕೆರೆಯ ಅಂಗಳದಲ್ಲಿ ನಿಂತು ಹಕ್ಕಿಗಳನ್ನು ವೀಕ್ಷಿಸಲು ಟವರ್‌ಗಳನ್ನು ಇಲ್ಲಿ ನಿರ್ಮಿಸಲಾಗಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ತೊಣ್ಣೂರಿನಲ್ಲಿರುವ ಕೆರೆ ವಿಶಾಲವ...