Hampi, ಫೆಬ್ರವರಿ 16 -- ಕರ್ನಾಟಕ ನದಿ ತೀರಗಳು ಬೇಸಿಗೆ ವೇಳೆ ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿವೆ. ನೈಸರ್ಗಿಕ ಜಲಧಾಮಗಳಾದ ಇಲ್ಲಿಗೆ ಸ್ನೇಹಿತರೊಂದಿಗೂ ಹೋಗಬಹುದು. ಬೇಸಿಗೆ ಶುರುವಾಯಿತೆಂದರೆ ಬಿಸಿಲ ಝಳಕ್ಕೆ ದೇಹ ತಣ್ಣನೆಯ ಸ್ಥಳವನ್ನು ಬಯಸುತ್ತದೆ. ಮನಸು ಅಂತಹ ಸ್ಥಳಗಳ ಹುಡುಕಾಟದಲ್ಲಿ ತೊಡಗುತ್ತದೆ. ಕರ್ನಾಟಕದಲ್ಲಿ ಹರಿಯುವ ಕಾವೇರಿ, ಕೃಷ್ಣಾ, ತುಂಗಭದ್ರಾ, ಭೀಮಾ, ತುಂಗಾ, ಕಾಳಿ, ಕುಮಾರಧಾರ, ಕಪಿಲಾ ಸಹಿತ ಹಲವು ನದಿಗಳ ಬೇಸಿಗೆ ಪ್ರವಾಸಕ್ಕಾಗಿ ಕೈಬೀಸಿ ಕರೆಯುತ್ತಿವೆ. ಇವು ಒಂದು ರೀತಿ ದೇಗುಲಗಳು ಇಲ್ಲವೇ ಪ್ರಮುಖ ಪ್ರವಾಸಿ ತಾಣವಾಗಿ ಹೆಸರು ಮಾಡಿದಂತವು. ಒಂದು ದಿನದ ಮಟ್ಟಿಗೆ ಈ ಸ್ಥಳಗಳು ಪ್ರವಾಸಕ್ಕೆ ಹೇಳಿ ಮಾಡಿಸಿದಂತಿವೆ. ಪ್ರವಾಸಕ್ಕೆ ಕುಟುಂಬದವರೊಂದಿಗೆ ಇಲ್ಲವೇ ಸ್ನೇಹಿತರೊಡಗೂಡಿ ಹೋದಾಗ ಖುಷಿಗೆ ಎಷ್ಟು ಒತ್ತು ನೀಡಲಾಗುತ್ತದೆಯೋ ಸುರಕ್ಷತೆಗೂ ಅಷ್ಟೇ ಮಹತ್ವ ನೀಡಬೇಕಾಗುತ್ತದೆ. ಕರ್ನಾಟಕದ ನದಿ ತೀರದ ಪ್ರಮುಖ ತಾಣಗಳ ಪಟ್ಟಿ ಇಲ್ಲಿದೆ.

ವಿಜಯನಗರ ಜಿಲ್ಲೆಯ ಪುರಾತನ ಪ್ರವಾಸಿ ತಾಣ ಹಂಪಿ. ಪಾರಂಪರಿಕ ಮಹತ್ವ ಇರುವ...